ನಾಲ್ಕನೇ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಸಮ್ಮೇಳನಾಧ್ಯಕ್ಷರಾಗಿ ಶ್ರೀ ಎ ಎಸ್ ಎನ್ ಹೆಬ್ಬಾರ್ ಆಯ್ಕೆ
ಕೋಟ : ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಕೋಟ ಕೋಟತಟ್ಟು ಗ್ರಾಮ ಪಂಚಾಯತ್, ಉಸಿರು ಕೋಟ, ಕಾರ್ಯನಿರತರ ಪತ್ರಕರ್ತರ ಸಂಘ ಬ್ರಹ್ಮಾವರ ತಾಲ್ಲೂಕು, ಕುಂದಾಪುರ ಕನ್ನಡ ಪರಿಷತ್ತು ಉಡುಪಿ ಜಿಲ್ಲೆ ಅವರ ಆಶ್ರಯದಲ್ಲಿ ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಮೇ 5 ರಂದು ನಡೆಯುವ ನಾಲ್ಕನೇಯ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಸಮ್ಮೇಳನಾಧ್ಯಕ್ಷರಾಗಿ ಕುಂದಾಪ್ರ ಕನ್ನಡ ಹರಿಕಾರ ಶ್ರೀ ಎ ಎಸ್ ಎನ್ ಹೆಬ್ಬಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಕುಂದಾಪುರ ಕನ್ನಡದ ಕಂಪನ್ನು ಪಸರಿಸಲು ಹಲವಾರು ಹೊಸ ಸಾಧ್ಯತೆಗಳ ಕೆಲಸಗಳನ್ನು ಮಾಡುತ್ತಾ, ಸಾಹಿತ್ಯ, ಕವನಗಳನ್ನು ರಚಿಸಿ ಆ ಮೂಲಕ ಆರಂಭದಲ್ಲಿಯೇ ಕುಂದಾಪ್ರ ಕನ್ನಡಕ್ಕೆ ಮೂಲ ದಿಕ್ಕನ್ನು ದೆಸೆಯನ್ನು ನೀಡಿ ದಂತಹವರು ಶ್ರೀ ಎಸ್ ಎಸ್ ಹೆಬ್ಬಾರರು. ಮೇ 5 ರಂದು ನಡೆಯುವ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಕಾರ್ಯಕ್ರಮಕ್ಕೆ ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್, ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ, ಸಂಚಾಲಕ ಶ್ರೀ ಸತೀಶ್ ವಡ್ಡರ್ಸೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.