ಕಾರಂತ ಥೀಮ್ ಪಾರ್ಕ್ : ವಿಡಿಯೋ ಎಡಿಟಿಂಗ್ ಸಂಬoಧಿಸಿದ ಕಾರ್ಯಾಗಾರ
ಕೋಟ : ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ(ರಿ)ಕೋಟ ಆಸರೆಯಲ್ಲಿ ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಜುಲೈ 6 ಮತ್ತು 7 ರಂದು ಸ್ನಾತಕೋತ್ತರ ಶಿಕ್ಷಕ ಕಂಪ್ಯೂಟರ್ ವಿಭಾಗ ಇಂಡಿಯನ್ ಸ್ಕೂಲ್ ಮಸ್ಕತ್ನ ಶ್ರೀಮತಿ ವೀಣಾ ಸುರೇಶ್ ಅವರು ಎರಡು ದಿನಗಳ ಉಚಿತ ಕಾರ್ಯಾಗಾರವನ್ನು ನಡೆಸಲಿದ್ದಾರೆ. Canva Editing, 123D Design, Artificial Intelligence, AR/VR ಕುರಿತಾದ ವಿಷಯಗಳ ಕುರಿತು ಮಾಹಿತಿ ನೀಡಲಿದ್ದು ಆಸಕ್ತರು ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಸೂರ್ಯ (7829729340) ಅವರನ್ನು ಸಂಪರ್ಕಿಸುವAತೆ, ಮೊದಲು ನೊಂದಾಯಿಸಿದ 20 ಅಭ್ಯರ್ಥಿಗಳಿಗೆ ಅವಕಾಶವಿದೆ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಕೆ. ಸತೀಶ್ ಕುಂದರ್, ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.