ಕೋಟ ಎಂಬ ಊರಿನ ಹೆಸರು ಕೇಳಿರದವರು ತುಂಬ ಕಡಿಮೆ. ಯಾಕೆಂದರೆ ಈ ಊರಿನ ಹೆಸರನ್ನು ಜಗತ್ತಿನಾದ್ಯಂತ ಹರಡಿಸಿದ ಮೊದಲ ಕೀರ್ತಿ ಕೋಟ ಡಾ| ಶಿವರಾಮ ಕಾರಂತರಿಗೆ ಸಲ್ಲಬೇಕು. ಕಾರಂತರ ಪರಿಚಯವಿಲ್ಲದ ಮಂದಿ ತುಂಬ ಕಡಿಮೆ. ಯಾಕೆಂದರೆ ಕಾರಂತರು ಕೈಯಾಡಿಸದ ಕ್ಷೇತ್ರ ಯಾವುದೂ ಇಲ್ಲ. ಸಾಹಿತ್ಯ, ನಾಟಕ, ಯಕ್ಷಗಾನ, ಕಾದಂಬರಿ, ಕಥಾ ಸಂಕಲನ, ಆತ್ಮಕಥೆಗಳು, ವಿಜ್ಞಾನ, ಪತ್ರಿಕಾರಂಗ ಹೀಗೆ ಹೇಳುತ್ತ ಹೋದರೆ ಸಮಯ ನಿಲ್ಲದು. ಆಡು ಮುಟ್ಟದ ಸೊಪ್ಪಿಲ್ಲ; ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ.
ಕಾರಂತರ ಹುಟ್ಟೂರು ಇಂದು ಕೋಟ ಮಂಡಲ ಪಂಚಾಯಿತಿಯಿಂದ ವಿಂಗಡಣೆಯಾಗಿ ಕೋಟತಟ್ಟು ಗ್ರಾಮ ಪಂಚಾಯತ್ ಆಗಿ ವಿಜೃಂಭಿಸುತ್ತಿದೆ.
ಕಾರಂತ ಥೀಂ ಪಾರ್ಕ್ ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲೆ ಎತ್ತಿ ಪ್ರವಾಸಿಗರನ್ನು, ಸಾಹಿತ್ಯಾಭಿಮಾನಿಗಳನ್ನು, ಪುಟಾಣಿ ಮಕ್ಕಳಿಂದ ಹಿಡಿದು ಅನೇಕ ಹಿರಿ-ಕಿರಿಯ ತಲೆಗಳನ್ನು ತನ್ನತ್ತ ಆಕರ್ಷಿಸುತ್ತಲಿದೆ, ಕೈ ಬೀಸುತ್ತಿದೆ.
ಬನ್ನಿ ನಿಮಗೆ ಥೀಂ ಪಾರ್ಕ್’ನ ಪರಿಚಯ ಹೇಳಿಕೊಳ್ಳುತ್ತ ಇಲ್ಲಿನ ವಿವಿಧ ಮಗ್ಗಲುಗಳನ್ನು ವಿವರವಾಗಿ ಪ್ರಿಯ ಓದುಗ ಮಿತ್ರರಿಗೆ ಹೇಳಬಯಸುತ್ತೇನೆ.
ಇಲ್ಲಿಗೆ ಸಮೀಪಿಸುತ್ತಲೆ ನಿಮ್ಮ ಮನ ಸೂರೆಗೊಳ್ಳುವಂತ ಹೊರಾಂಗಣ ಸೌಂದರ್ಯ ನಿಮ್ಮನ್ನು ತನ್ನತ್ತ ಬಹುಬೇಗ ದಾಪುಗಾಲು ಇಡುವಂತೆ ನಿಮ್ಮ ಮನ ಒಲಿಸುವಲ್ಲಿ ಥೀಂ ಪಾರ್ಕ್ ಯಶಸ್ವಿಯಾಗುತ್ತದೆ.
ಇದರ ಪ್ರವೇಶ ದ್ವಾರದ ಒಳಬರುವ ಮೊದಲೇ ಹೊರಾಂಗಣದ ಎಡಬಲಗಳಲ್ಲಿ ಸಾಂಸ್ಕೃತಿಕ ಉಬ್ಬು ಕಲಾಕೃತಿಗಳು ನಿಮ್ಮ ಗಮನ ಸೆಳೆಯುತ್ತದೆ. ಹಾಗೆ ಒಳಪ್ರವೇಶಿಸುತ್ತಲೇ ನಿಮ್ಮನ್ನು ಸ್ವಾಗತಿಸಲು ದೇವದಾರಿ ಮರದ ಕಟ್ಟೆ ಮೇಲಿರುವ ಥೀಂ ಪಾರ್ಕ್ ಹೆಸರಿರುವ ಕಲ್ಲಿನ ಫಲಕ ಹಾಗೂ ಒಂದು ಅಜ್ಜಿ ಪುಟಾಣಿ ಮಕ್ಕಳಿಗೆ ಕಥೆ ಹೇಳುತ್ತಿರುವ ಸಿಮೆಂಟಿನಿಂದ ಮಾಡಿರುವ ಕಲಾಕೃತಿ ಇದೆ. ಹಾಗೆ ಮರದ ಕೆಳಗೆ ವಿಶ್ರಾಂತಿ ಪಡೆಯಲು ಕಲ್ಲಿನ ಬೆಂಚುಗಳು ಹೊರ ಆವರಣದಲ್ಲಿ ಸಿಗುತ್ತವೆ. ಇನ್ನು ಒಂದೊಂದೇ ವಿವರವನ್ನು ಹೇಳುತ್ತೇನೆ ಬನ್ನಿ. ದೇವದಾರಿ ಮರವನ್ನು ದಾಟಿ ಎಡಕ್ಕೆ ತಿರುಗಿದರೆ ಮೊದಲು ಸಿಗುವುದು ‘ಕಾರಂತ ಸಿರಿ’ ಮಳಿಗೆ. ನಿಮಗೆ ಎದುರಾಗುತ್ತದೆ. ಅಲ್ಲಿ ಗುಡಿ ಕೈಗಾರಿಕೆಯಿಂದ ನಿರ್ಮಿತವಾದ ವಸ್ತುಗಳು ಹಾಗೂ ಅನೇಕ ಸಾಹಿತಿಗಳ ಪುಸ್ತಕ ಮಾರಾಟ ಮಳಿಗೆ, ಕರಕುಶಲ ವಸ್ತುಗಳನ್ನು ನೀವು ಕೊಳ್ಳಬಹುದು. ಹಾಗೆಯೇ ಅಂಗಡಿಯಿಂದ ಹೊರ ಬಂದು ನಿಮ್ಮ ಕತ್ತನ್ನು ಮೇಲೆತ್ತಿದರೆ ನಿಮಗೆ ಕಾಣಸಿಗುವುದು ಯಕ್ಷಗಾನದ ಜಟಾಯು. ಇದು ಸಿಮೆಂಟಿನಿಂದ ನಿರ್ಮಿತವಾಗಿದೆ. ಆದರೆ ಇದು ಏನು? ಕಾರಂತರಿಗೂ ಜಟಾಯುವಿಗೂ ಏನು ಸಂಬಂಧ ಎನ್ನುವ ಯೋಚನೆ ನಿಮ್ಮ ಮನದಲ್ಲಿ ಮೂಡುವುದು ಸಹಜ. ಹೇಳುತ್ತೇನೆ ಕೇಳಿ. ನಾನು ಮೊದಲೇ ಹೇಳಿದ ಹೇಗೆ ಕಾರಂತರು ಬಹುಮುಖ ಪ್ರತಿಭೆ ಕರಾವಳಿ ಜಿಲ್ಲೆಯ ಗಂಡುಕಲೆ ‘ಯಕ್ಷಗಾನ’ವನ್ನು ದೇಶ ವಿದೇಶಗಳ ಉದ್ದಗಲಕ್ಕೂ ಪರಿಚಯಿಸಿದ ಕಾರಂತರು ಯಕ್ಷಗಾನದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ವಿದೇಶಕ್ಕೆ ಕೊಂಡೊಯ್ದ ಕೀತರ್ಿಕಾರಂತರಿಗೆ ಸಲ್ಲುತ್ತದೆ. ಹಾಗೆಯೇ ದೇಶ- ವಿದೇಶಗಳಲ್ಲಿ ಪ್ರದರ್ಶನ ಮಾಡುತ್ತಿರುವ ಕಾರಂತರು ರಾಮಾಯಣದಿಂದ ಆಯ್ದುಕೊಂಡ ಕಥೆ ಜಟಾಯು ಮೋಕ್ಷದಂತ ಅನೇಕ ಪ್ರಸಂಗಗಳನ್ನು ಪ್ರಸ್ತುತ ಪಡಿಸುತ್ತಿದ್ದರು. ಕಾರಂತರ ಯಕ್ಷಗಾನದ ಜಟಾಯು ಸಿಮೆಂಟಿನಿಂದ ನಿಮರ್ಿಸಲಾಗಿದೆ. ಸುಂದರವಾದ ಜಟಾಯು ಮೂತರ್ಿ ಮನಸ್ಸಿಗೆ ಮುದ ನೀಡುವ ಆಕರ್ಷಕ ಮೈಕಟ್ಟು ಹಾಗೂ ಬಣ್ಣವನ್ನು ಹೊಂದಿದೆ.
ಹಾಗೆಯೇ ಮುಂದುವರಿದರೆ, ನಿಮಗೆ ಕಾಣಸಿಗುವುದು ಗಾಡಿ ಕೂಸಣ್ಣನ ಕಲಾಕೃತಿ. ಇದನ್ನು ಪೈಬರ್ನಿಂದ ಮಾಡಲಾಗಿದೆ. ಈ ಕಲಾಕೃತಿಯನ್ನು ಬೆಂಗಳೂರಿನ ಹೆಸರಾಂತ ‘ಪ್ರತಿರೂಪಿ’ ಎಂಬ ಸಂಸ್ಥೆ ತಯಾರಿಸಿದೆ. ಜೋಡೆತ್ತು ಹಾಗೂ ಗಾಡಿ ಹಾಗೆಯೇ ಈ ಕಲಾಕೃತಿಯನ್ನು ಪರಿಚಯಿಸುತ್ತೇನೆ ಕೇಳಿ. ‘ಗಾಡಿ ಕೂಸಣ್ಣ’ ಎಂದರೆ ಈಗಿನ ಮಕ್ಕಳಿಗೆ ಪರಿಚಯ ಇರದು.
1970-80-90 ರ ದಶಕದಲ್ಲಿ ಕುಂದಾಪುರ – ಬ್ರಹ್ಮಾವರ ಪರಿಸರದಲ್ಲಿ ಜೋಡು ಎತ್ತಿನ ಗಾಡಿಯೆ ಸರಕು ಸಾಗಣೆಗೆ ಇರುವ ಸಾರಿಗೆ ವ್ಯವಸ್ಥೆ. ಹಾಗೆ ಕೂಸಣ್ಣ ಎಂಬವರು ಜೋಡೆತ್ತಿನ ಗಾಡಿಯಲ್ಲಿ ಕೋಟ ಪರಿಸರದಲ್ಲಿ ಮರಳು, ಕಲ್ಲು, ಮಣ್ಣು ಹಾಗೆ ಕುಂದಾಪುರ, ಬ್ರಹ್ಮಾವರ ಸಂತೆಗೆ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಹಾಗೂ ಸಂತೆಯ ಸರಕು ಸಾಮಾನುಗಳ ಸಾಗಾಟಕ್ಕೆ ಇವರ ಗಾಡಿಯೆ ಅಚ್ಚು-ಮೆಚ್ಚು. ಆಗಿನ ಕಾಲದಲ್ಲಿ ಜೋಡೆತ್ತಿನ ಗಾಡಿಗಳದೇ ಕಾರುಬಾರು ಜೋರಾಗಿಯೇ ಇತ್ತು. ಈಗ ಕಾಲ ಬದಲಾಗಿ ಮೋಟಾರು ವಾಹನಗಳ ಬರಾಟೆಯಲ್ಲಿ ಕಾಲನ ಹೊಡೆತಕ್ಕೆ ಸಿಲುಕಿ ಎತ್ತಿನ ಗಾಡಿಗಳು ಬಿಡಿ. ಪ್ರದರ್ಶನಕ್ಕೆ ಎಂದರೂ ಒಂದು ಗಾಡಿ ಸಿಗದು. ಹಾಗಾಗಿ ಮುಂದಿನ ಪೀಳಿಗೆಯ ಅರಿವಿಗಾಗಿ ಒಂದು ಸುಂದರವಾದ ಜೋಡೆತ್ತಿನ ಗಾಡಿಯನ್ನು ಥೀಂ ಪಾರ್ಕ್’ನಲ್ಲಿ ನಿಲ್ಲಿಸಲಾಗಿದೆ.
ಹ್ಞಾ…. ಇನ್ನೂ ಒಳ ಆವರಣವನ್ನು ಪ್ರವೇಶ ದ್ವಾರದ ಎಡ ಬಲಗಳಲ್ಲಿ ತೆಂಕು-ಬಡಗಿನ ಸುಂದರವಾದ ಯಕ್ಷಗಾನದ ಮೂರ್ತಿಗಳು ನಿಮ್ಮ ಚಿತ್ತ ಸೆಳೆಯುತ್ತದೆ. ಇದು ಸಿಮೆಂಟ್ ಕಲಾಕೃತಿಯಾಗಿದ್ದು, ಇದನ್ನು ಕನ್ನಡ- ಸಂಸ್ಕೃತಿ ಇಲಾಖೆಯ ಶಿಲ್ಪ ಕಲಾ ಅಕಾಡೆಮಿ ಕಲಾವಿದರು ರಚಿಸಿದ್ದಾರೆ. ಈ 2 ಶಿಲ್ಪಗಳು ತೆಂಕು ಬಡಗಿನ ಯಕ್ಷಗಾನದ 2 ತಿಟ್ಟುಗಳನ್ನು ಪ್ರತಿನಿಧಿಸುತ್ತವೆ. ಒಂದಕ್ಕಿಂತ ಒಂದು ಮೇಲೆ ಎನ್ನುವ ರೀತಿಯಲ್ಲಿ ಗಮನ ಸೆಳೆಯುತ್ತವೆ.
ಕನ್ನಡ – ಸಂಸ್ಕೃತಿ ಇಲಾಖೆಯ ಶಿಲ್ಪಕಲಾ ಅಕಾಡೆಮಿಯ ಸದಸ್ಯರು ನಿರ್ಮಿಸಿರುವ ಎಲ್ಲಾ ಪ್ರತಿಕೃತಿಗಳು ಸುಂದರವಾಗಿ ಮೂಡಿ ಬಂದಿದೆ. ಜಟಾಯು ಯಕ್ಷಗಾನದ ಸ್ವಾಗತ ಗೊಂಬೆಗಳು, ಚೋಮ, ಮೂಕಜ್ಜಿಯ ಕನಸುಗಳು ಪುಸ್ತಕ, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಮೂತರ್ಿಗಳು 2 ಕಾರಂತರ ಮೂತರ್ಿಗಳು ಇಲ್ಲಿನ ಸೌಂದರ್ಯ ಹೆಚ್ಚಿಸಿದೆ.
ಹಾಗೆಯೇ ಒಳ ಆವರಣಕ್ಕೆ ಪ್ರವೇಶ ಮಾಡುತ್ತಲೇ ಬಲಭಾಗದಲ್ಲಿ ವಿಶಾಲವಾದ ಹಚ್ಚ ಹಸಿರಿನ ಹುಲ್ಲು ಹಾಸು, ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಒಂದು ಸಣ್ಣ ಕಲ್ಲಿನಲ್ಲಿ ನಿರ್ಮಿತವಾದ ಮೀನಿನ ಕಾರಂಜಿ ಹಾಗೆ ಮುಂದಕ್ಕೆ ಮತ್ತೊಂದು ಕಲ್ಲಿನ ಕಲಾಕೃತಿ, ಕಾಬಾಳೆಗಿಡಗಳು ನಿಮ್ಮ ಮನ ಮುದಗೊಳಿಸದೆ ಇರಲಾರದು. ನಿಮ್ಮ ಕಿಸೆಯಲ್ಲಿ ಇರುವ ಮೊಬೈಲ್ ಸೆಲ್ಫಿ ತೆಗೆಯಲು ಕೈಗೆ ಬರದಿರಲಾರದು. ಇನ್ನು ಬಲಭಾಗದಲ್ಲಿ ಒಂದು ಕಲ್ಲಿನಿಂದ ಕಟ್ಟಿದ ಸಣ್ಣ ಕೆರೆ. ಅದರ ಮಧ್ಯಭಾಗದಲ್ಲಿ ಶಿವರಾಮ ಕಾರಂತರ ಐದು ಅಡಿ ಎತ್ತರದ ಕಂಚಿನ ಪ್ರತಿಮೆ. ಇದನ್ನು ನೋಡುತ್ತಲೇ ಕೈ ಎತ್ತಿ ಮುಗಿಯಬೇಕು ಎನ್ನುವ ಭಾವ ನಿಮ್ಮ ಮನದಲ್ಲಿ ಬಾರದಿರದು. ಅಂದ ಹಾಗೆ ಈ ಪ್ರತಿಮೆ ಹತ್ತಿರಕ್ಕೆ ಹೋಗಲು ಸಂಪರ್ಕಕ್ಕೆ ಒಂದು ಸಣ್ಣ ಸ್ಟೀಲ್ ಬ್ರಿಜ್ಡ್ ಇದೆ. ಹಾಗಂತ ನೀವು ಹತ್ತಿರಕ್ಕೆ ಹೋಗಲು ಅನುಮತಿ ಇಲ್ಲ, ಯಾಕೆಂದರೆ ನಿಮ್ಮ ಭದ್ರತೆಯ ಸಲುವಾಗಿ.
ಚೆನ್ನಾಗಿದೆ ಕಾರಂತರ ಜೊತೆ ನಿಂತು ಒಂದು ಫೋಟೋ ತೆಗೆಯಬಹುದಿತ್ತು ಅನುಮತಿ ಇಲ್ಲವೆ? ಅಂತ ನಿಮ್ಮ ಮನದಲ್ಲಿ ಬೇಸರಿಸಬೇಕಾಗಿಲ್ಲ. ಅದಕ್ಕಾಗಿಯೇ ಕೆರೆಯ ಮೂಲೆಯಲ್ಲಿ ಮೂಡಿರುವ 4 ವಿಶ್ರಾಂತಿ ದಿಬ್ಬಗಳಲ್ಲಿ ಮೊದಲಿಗೆ ಸಿಗುವ ದಿಬ್ಬದಲ್ಲಿ ಕಾರಂತರು ಕುಳಿತ ಭಂಗಿಯಲ್ಲಿ ಫೈಬರ್ನಿಂದ ಮಾಡಿದ ಕಾರಂತರ ಪ್ರತಿರೂಪ ಇದೆ. ಅಲ್ಲಿ ನೀವು ಮನಸೋ ಇಚ್ಛೆ ನಿಮ್ಮ ಸೆಲ್ಫಿ ಫೋಟೋ ತೆಗೆಯಬಹುದು. ಇನ್ನೂ ಮುಂದಕ್ಕೆ ಬಂದು ಬಲಕ್ಕೆ ತಿರುಗಿ ಆಗ ನಿಮ್ಮ ಗಮನ ಸೆಳೆಯುವುದು ಸಿಮೆಂಟಿನಿಂದ ನಿರ್ಮಿತವಾದ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯ ಪುಸ್ತಕದ ಪ್ರತಿರೂಪ. ಮೂಕಜ್ಜಿಯ ಕನಸುಗಳು ಕಾದಂಬರಿ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕಾದಂಬರಿ. ಹಾಗಾಗಿಯೇ ಇದನ್ನು ನಿರ್ಮಿಸಲಾಗಿದೆ. ಈ ಕಾದಂಬರಿಯ ಮೂಲಕೃತಿಯ ಮುಖಪುಟದಲ್ಲಿ ಒಂದು ಅಜ್ಜಿಯ ರೇಖಾಚಿತ್ರವಿದೆ. ಆದರೆ ಇಲ್ಲಿ ಸ್ವಲ್ಪ ಮಾರ್ಪಾಡು ಮಾಡಲಾಗಿದೆ. ಅಜ್ಜಿಯ ರೇಖಾಚಿತ್ರದ ಬದಲಾಗಿ ಕಾರಂತರ ಮುಖದ ಉಬ್ಬು ಚಿತ್ರ ಬಿಡಿಸಲಾಗಿದೆ. ಇನ್ನು ಮೂಕಜ್ಜಿಯ ಕನಸುಗಳು ಎಂದು ಬರೆದಿರುವ ಉಬ್ಬು ಅಕ್ಷರದ ಮೇಲಿನಿಂದ ಸಣ್ಣ ನೀರಿನ ಜರಿ ಹರಿಯುತ್ತಿದ್ದು ಇದಕ್ಕೆ ಅಳವಡಿಸಿದ ಬಣ್ಣದ ಬೆಳಕು ಸಂಜೆಯ ನಂತರ ಇದರ ಸೌಂದರ್ಯ ನೂರ್ಮಡಿಗೊಳಿಸುತ್ತದೆ.
ಅಲ್ಲಿಂದ ನೇರಕ್ಕೆ ಎಡಕ್ಕೆ ಬಂದರೆ ನಿಮ್ಮನ್ನು ಸ್ವಾಗತಿಸಲು ಚೋಮ ಡೊಳ್ಳು ಹಿಡಿದು ನಿಂತಿದ್ದಾನೆ. ಈ ಕಲಾಕೃತಿಯು ಸಿಮೆಂಟಿನಿಂದ ಮಾಡಿದ್ದು, ಇದು ಕಾರಂತರ ‘ಚೋಮನ ದುಡಿ’ ಕಾದಂಬರಿಯ ಕಥಾನಾಯಕ ಚೋಮನ ಪ್ರತಿರೂಪ. ಬಹಳ ಆಕರ್ಷಕವಾಗಿದ್ದು ಡೊಳ್ಳು ಹೊಡೆಯುತ್ತಿರುವ ಭಂಗಿಯಲ್ಲಿ ನಿರ್ಮಿಸಲಾಗಿದೆ.
ಹಾ… ಈಗ ನಿಮಗೆ ಕಾರಂತ ಥೀಂ ಪಾರ್ಕ್’ನ ಹಲವು ಮಗ್ಗಲುಗಳ ಪರಿಚಯವಾಗಿದೆ. ಇನ್ನು ಕಲಾಭವನದ ಒಳಗೆ ಹೋಗೋಣ. ಕಲಾಭವನದ ನಾಲ್ಕೈದು ಮೆಟ್ಟಿಲು ಹತ್ತಿದರೆ ಒಂದು ವಿಶಾಲವಾದ ಹಜಾರ ಇದ್ದು ಮೆಟ್ಟಿಲನ್ನು ಹತ್ತುತ್ತಲೇ ನಿಮ್ಮ ಗಮನ ಫೈಬರ್ನಿಂದ ನಿರ್ಮಿತವಾದ ಒಂದು ಉಬ್ಬು ಶಿಲ್ಪ ಗಮನ ಸೆಳೆಯುತ್ತದೆ. ಅದುವೇ ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕಲಾಕೃತಿ. ಈ ಕಲಾಕೃತಿಯ ರೇಖಾಚಿತ್ರವನ್ನು ರಚಿಸಿದವರು ಖ್ಯಾತ ರೇಖಾಚಿತ್ರಕಾರರಾದ ಕೆ.ಕೆ.ಹೆಬ್ಬಾರರು. ಇದರ ಉಬ್ಬು ಚಿತ್ರವನ್ನು ರಚಿಸಿದವರು ಉಡುಪಿಯ ನಿಮರ್ಿತಿ ಸಂಸ್ಥೆ. ಕೆ.ಕೆ ಹೆಬ್ಬಾರರು ಈ ಚಿತ್ರದಲ್ಲಿ ಸಮಗ್ರ ಕಾರಂತರನ್ನು ಒಂದು ಚಿತ್ರದಲ್ಲಿ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಹಾಗೂ ಈ ಪ್ರಯತ್ನದಲ್ಲಿ ಪರಿಪೂರ್ಣವಲ್ಲದಿದ್ದರೂ ತಕ್ಕಮಟ್ಟಿನ ಯಶಸ್ಸನ್ನು ಪಡೆದಿದ್ದಾರೆ. ಈ ಚಿತ್ರವನ್ನು ರಚಿಸಿದ ಕೆ.ಕೆ.ಹೆಬ್ಬಾರರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು.
ಈ ಚಿತ್ರಕ್ಕೆ ಕಾರಂತರು ರಚಿಸಿದ ಶ್ರೇಷ್ಠ ಕಾದಂಬರಿಯಾದ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂಬ ಹೆಸರನ್ನು ಇಡಲಾಗಿದೆ. ಇನ್ನು ಈ ಚಿತ್ರದ ವಿವರವನ್ನು ನಿಮಗೆ ತಿಳಿಸಬೇಕಾಗಿದೆ. ಈ ಚಿತ್ರ 4 ಮುಖಗಳು, 5 ಕೈಗಳು, 2 ಕಾಲುಗಳನ್ನು ಹೊಂದಿದೆ.
ಎರಡು ಕಾಲುಗಳಲ್ಲಿ ಗೆಜ್ಜೆಗಳು ಇವರೊಬ್ಬ ಶ್ರೇಷ್ಠ ಯಕ್ಷಗಾನ ಕಲಾವಿದ ಮತ್ತು ಯಕ್ಷಗಾನ ಗುರು ಎಂಬುದನ್ನು ಸಾರುತ್ತದೆ. ಬಲಗಡೆ ಒಂದು ಕೈ ಇದ್ದು ಕೈಯಲ್ಲಿ ಒಂದು ಗರಿ(ಲೇಖನಿ)ಯನ್ನು ಹಿಡಿಯಲಾಗಿದೆ. ಇದು ಕಾರಂತರು ಇಬ್ಬ ಒಳ್ಳೆಯ ಲೇಖಕ ಎನ್ನುವುದನ್ನು ಗುರುತಿಸುತ್ತದೆ. ಎಡಗಡೆಯಲ್ಲಿ ನಾಲ್ಕು ಕೈಗಳಿದ್ದು ಒಂದು ಕೈಯನ್ನು ಮೇಲಕ್ಕೆ ಎತ್ತಿ ಹಿಡಿಯಲಾಗಿದ್ದು, ಕೈ ಜೊತೆಗೆ ಸೂರ್ಯ ಚಂದ್ರರ ಚಿತ್ರವನ್ನು ನಿಮರ್ಿಸಲಾಗಿದೆ. ಇದು ಕಾರಂತರು ಹುಟ್ಟು ಹೋರಾಟಗಾರ ಹಾಗೂ ಬಂಡಾಯದ ಗುರುತಾಗಿದೆ. ಹುಟ್ಟಿನಿಂದ ಅಂತ್ಯದವರೆಗೆ ಕಾರಂತರು ಸ್ವಾಭಿಮಾನಿಯಾಗಿ ತನ್ನತನದೊಂದಿಗೆ ಯಾವತ್ತು ರಾಜಿಯಾಗದಿರುವುದರ ಗುರುತ್ತಾಗಿ ಸೂರ್ಯ ಚಂದ್ರರ ಕುರುಹು ತೋರಿಸಲಾಗಿದೆ. ಹಾಗೆ ಕಾರಂತರ ಕೀತರ್ಿ ಸೂರ್ಯ ಚಂದ್ರರು ಇರುವಲ್ಲಿಯವರೆಗೆ ಅಜರಾಮರವಾಗಿದೆ. ಎನ್ನುವುದನ್ನು ಸಾರುತ್ತದೆ.
ಹಾಗೆ 2, 3, 4 ನೇ ಕೈಗಳಲ್ಲಿ ಪುಸ್ತಕಗಳನ್ನು ಕೊಡಲಾಗಿದೆ. ಈ ಪುಸ್ತಕಗಳು ಕಾರಂತರು ಒಬ್ಬ ಒಳ್ಳೆಯ ಕಾದಂಬರಿಕಾರ, ಕಥೆಗಾರ, ನಾಟಕ ರಚನಾಕಾರ ಎಂಬುದನ್ನು ಸೂಚಿಸುತ್ತದೆ.
ಇನ್ನು ಎದೆಯ ಮೇಲೆ ಹಬ್ಬಿರುವ ಒಂದು ಬಳ್ಳಿ ಇದನ್ನು ಕೆಲವರು ತಪ್ಪಾಗಿ ತಿಳಿದು ಜನಿವಾರ ಎಂದು ಹೇಳುತ್ತಾರೆ. ಇದು ಸರಿಯಲ್ಲ. ಇದು ಹಸಿರಿನ ಸಂಕೇತ ಇದು ಅವರೊಬ್ಬ ಪರಿಸರವಾದಿ ಎಂಬುದನ್ನು ಸೂಚಿಸುತ್ತದೆ. ಕಾರಂತರು ರಚಿಸಿದ ಅನೇಕ ಕೃತಿಗಳು ಪರಿಸರದೊಂದಿಗೆ ಬೆರೆತಿವೆ. ಗಿಡ, ಮರ, ಬಳ್ಳಿ, ಗುಡ್ಡ ಕಾಡುಗಳು ಇಲ್ಲದೆ ಕಾರಂತರ ಕೃತಿಗಳು ಪೂರ್ಣವಾಗದು. ಹಾಗೆ ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ಧುಮುಕಿದ್ದರು ಕಾರಂತರು. ಪರಿಸರದ ಮೇಲಿನ ಪ್ರೀತಿಯ ಸಂಕೇತವನ್ನು ಸೂಚಿಸುತ್ತದೆ. ಇನ್ನು ಎರಡು ಕಾಲುಗಳ ಹಿಂಬದಿಯಲ್ಲಿ ಕಡಲನ್ನು ರಚಿಸಲಾಗಿದೆ. ಇದು ಕಾರಂತರು ಕಡಲ ತಡಿಯ ಭಾರ್ಗವ ಎಂಬುದನ್ನು ಸೂಚಿಸುತ್ತದೆ.
ಅಂದ ಹಾಗೆ ಈ ಉಬ್ಬು ಚಿತ್ರದ ಬೆಳ್ಳಿಯ ಫಲಕವನ್ನು ಕಾರಂತ ಹುಟ್ಟೂರ ಪ್ರಶಸ್ತಿ ವಿಜೇತರಿಗೆ ನೀಡಲಾಗಿದೆ. ಇಲ್ಲಿರುವ ಎಲ್ಲಾ ಕೋಣೆಗಳಿಗೆ ಕಾರಂತರ ಕಾದಂಬರಿಯ ಹೆಸರು ಇಡಲಾಗಿದೆ. ವಿಶಾಲವಾದ ಹಜಾರದ ಎಡಭಾಗದಲ್ಲಿ ಒಂದು ಕಿರು ಸಭಾಂಗಣವಿದ್ದು ಇದಕ್ಕೆ ಚೋಮನ ದುಡಿ ಎಂದು ಹೆಸರಿಡಲಾಗಿದೆ. ಇಲ್ಲಿ ಸಣ್ಣ ಮಕ್ಕಳ ಬೇಸಿಗೆ ಶಿಬಿರಗಳು, ಮಕ್ಕಳಿಗೆ ಯಕ್ಷಗಾನ ತರಬೇತಿ ಹಾಗೂ ಇಲ್ಲಿ ಸಣ್ಣ ಪ್ರೊಜೆಕ್ಟರ್ ಇದ್ದು ಇದರಲ್ಲಿ ಡಾ| ಶಿವರಾಮ ಕಾರಂತರ ಸಾಕ್ಷ್ಯ ಚಿತ್ರಗಳನ್ನು ಬರುವ ಪ್ರವಾಸಿಗರಿಗೆ ತೋರಿಸಲಾಗುತ್ತದೆ.
ಅಲ್ಲೇ ಪಕ್ಕದಲ್ಲಿ ಅಂಗನವಾಡಿ ಕೇಂದ್ರವಿದ್ದು, ಇದಕ್ಕೆ ಚಿಣ್ಣರ ಅಂಗಳ ‘ಕುಡಿಯರ ಕೂಸು’ ಎಂಬುದಾಗಿ ನಾಮಕರಣ ಮಾಡಲಾಗಿದ್ದು, ಅಂಗನವಾಡಿಯ ಗೋಡೆಗಳಲ್ಲಿ ಕಾರ್ಟೂನ್ ಚಿತ್ರಗಳನ್ನು ಬಿಡಿಸಲಾಗಿದ್ದು, ಮಕ್ಕಳ ಮನ ಮುದಗೊಳಿಸುತ್ತದೆ. ಸುಮಾರು 1000 ಜನಸಂಖ್ಯೆಯನ್ನು ಹೊಂದಿದ್ದು 75 ಸಂಖ್ಯೆಯಲ್ಲಿ ಪೂರಕ ಪೌಷ್ಠಿಕ ಆಹಾರದ ಫಲಾನುಭವಿಗಳನ್ನು ಹೊಂದಿದ್ದು, 25ಕ್ಕೂ ಹೆಚ್ಚು ಪುಟಾಣಿಗಳು ಇಲ್ಲಿ ಶಾಲಾ ಪೂರ್ವ ಶಿಕ್ಷಣದ ಸಂಪೂರ್ಣ ಸೌಲಭ್ಯ ಪಡೆಯುತ್ತಿದ್ದಾರೆ. ಇಲ್ಲಿ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು ಪ್ರತ್ಯೇಕ ಅಡುಗೆ ಕೋಣೆಯನ್ನು ಹೊಂದಿದೆ. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಅಂಗನವಾಡಿ ಕೇಂದ್ರವು ಸುಂದರವಾಗಿ ಮೂಡಿ ಬಂದಿದ್ದು, ಸ್ಥಳೀಯ ಪಂಚಾಯತ್ನ ನೆರವಿನೊಂದಿಗೆ ಮಾದರಿ ಅಂಗನವಾಡಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಅಲ್ಲದೆ 5 ಸ್ತ್ರೀ ಶಕ್ತಿ ಸಂಘಗಳನ್ನು ಹೊಂದಿದ್ದು ಸರಿ ಸುಮಾರು 100 ಮಹಿಳೆಯರನ್ನು ಆಥರ್ಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲರನ್ನಾಗಿಸುತ್ತಿದೆ.
ಹಾಗೆಯೇ ಬಲಭಾಗದಲ್ಲಿ ಕಾರ್ಯಲಯ ‘ಆರ್ಟ್ ಗ್ಯಾಲರಿ’ ಇದ್ದು ಇಲ್ಲಿ ಕಾರಂತರ ಅಮೂಲ್ಯವಾದ ಕಪ್ಪು ಬಿಳುಪಿನ ಫೋಟೋಗಳು ಹಾಗೂ ಅವರ ಪತ್ನಿ ಲೀಲಾ ಕಾರಂತ ಹಾಗೂ ಮಕ್ಕಳ ಜೊತೆಗಿನ ಫೋಟೋಗಳು ಮತ್ತು ಅನೇಕ ಖ್ಯಾತ ಚಿತ್ರಕಾರರು ಕಾರಂತರು ಮತ್ತು ಕಾರಂತರ ವಿಷಯಾಧಾರಿತ ಚಿತ್ರಗಳನ್ನು ಬರೆದಿರುವ ಅನೇಕ ಚಿತ್ರಗಳನ್ನು ಬಿಡಿಸಿದ್ದಾರೆ ಮತ್ತು ಬ್ರಹ್ಮಾವರ ಫೋಟೋಗ್ರಾಫಿಕ್ ಅಸೋಸಿಯೇಶನ್ರವರ ಕೆಲವೊಂದು ಅಪರೂಪದ ಫೋಟೋಗಳು ಗೋಡೆಗಳಲ್ಲಿ ರಾರಾಜಿಸುತ್ತಿದೆ. ಮತ್ತು ಇದುವರೆಗೆ ಕಾರಂತ ಹುಟ್ಟೂರು ಪ್ರಶಸ್ತಿಗಳನ್ನು ಪಡೆದ ಮಹಾನುಭಾವರ ಫೋಟೋಗಳು ಇವೆ. ಇಲ್ಲಿಯೇ ಪಕ್ಕದಲ್ಲಿ ರಂಗ ಮಂದಿರ. ಇದಕ್ಕೆ ‘ಮೂಕಜ್ಜಿಯ ಕನಸುಗಳು’ ಎಂದು ಹೆಸರಿಸಲಾಗಿದೆ. ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ವಾಷರ್ಿಕ ಕಾರಂತ ಹುಟ್ಟೂರು ಪ್ರಶಸ್ತಿಯನ್ನು ಇದೇ ರಂಗ ಮಂದಿರದಲ್ಲಿ ನೀಡಲಾಗುತ್ತಿದೆ. ಸುಮಾರು 600ಕ್ಕೂ ಹೆಚ್ಚು ಜನರು ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಬಹುದು. ಆದರೆ ಇಲ್ಲಿಯ ವೇದಿಕೆಯಲ್ಲಿ ಒಂದು ವಿಶೇಷವಿದೆ. ಎಲ್ಲಾ ಕಡೆಯಲ್ಲಿ ಕಲಾವಿದರು ಎತ್ತರದ ವೇದಿಕೆಯಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನ ಮಾಡುತ್ತಾರೆ. ಆದರೆ ಇಲ್ಲಿ ಪ್ರೇಕ್ಷಕ ಮಹಾಶಯರು ಎತ್ತರದಲ್ಲಿ ಇರುತ್ತಾರೆ. ಇಲ್ಲಿ ವಿದ್ಯುತ್ ಹೋದರೂ ಜನರೇಟರ್ನ ವ್ಯವಸ್ಥೆ ಇದ್ದು ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಸನ್ನದ್ಧವಾಗಿ ನಿಂತಿದೆ.
ಇನ್ನು ಮೇಲಿನ ಅಂತಸ್ತಿಗೆ ಹೋಗೋಣ. ದೊಡ್ಡ ಹೆಬ್ಬಾಗಿಲು ದಾಟಿ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬರುತ್ತಿದ್ದಂತೆಯೆ ಕಾರಂತರ ಕೃತಿ ಪ್ರಪಂಚ ನಿಮ್ಮ ಎದುರಿಗೆ ನಿಲ್ಲುತ್ತದೆ. ಕಾರಂತರು ಯಾವ ಯಾವ ಇಸವಿಯಲ್ಲಿ ಯಾವ ಯಾವ ಕಾದಂಬರಿ, ಕೃತಿ ರಚಿಸಿದರು ಎಂಬ ವಿವರಣೆಗಳುಳ್ಳ ಕೃತಿ ಪ್ರಪಂಚ ಸಿಗುತ್ತದೆ.
ಹಾಗೆಯೇ ಮೆಟ್ಟಿಲು ಹತ್ತಿ ಮೇಲೆ ಬನ್ನಿ, ಇಲ್ಲಿ ನಿಮಗೆ ಕನ್ನಡದ 8 ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳು ನಿಮ್ಮನ್ನು ಆಶೀರ್ವದಿಸಲು ಕಾದು ನಿಂತಿದ್ದಾರೆ. ಕಾರಂತರು ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ, ವಿ.ಕೃ.ಗೋಕಾಕ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಯು.ಆರ್. ಅನಂತಮೂತರ್ಿ ಹೀಗೆ 8 ಜ್ಞಾನಪೀಠ ವಿಜೇತರ ಮೂತರ್ಿಗಳನ್ನು ಪ್ರತಿಸ್ಥಾಪಿಸಲಾಗಿದೆ. ಎಲ್ಲರೂ ಒಂದಕ್ಕಿಂತ ಒಂದು ಮಿಗಿಲಾದ ರೂಪ ಹೊಂದಿದೆ. ಹಾಗೂ ಕಾರಂತರು ಕ್ಯಾಮರ ಹಿಡಿದು ಕುಳಿತಿರುವ ಭಂಗಿಯಲ್ಲಿನ ಕಲಾಕೃತಿ ಮತ್ತು ಮಕ್ಕಳಿಗೆ ಕಥೆ ಹೇಳುತ್ತಿರುವ ಮೂರ್ತಿ ಗಮನ ಸೆಳೆಯುತ್ತವೆ. ಗಾಂಧಿಯ ಒಂದು ಚಿಕ್ಕ ಪ್ರತಿಮೆ ಇದ್ದು, ಇದು ಬೆಂಗಳೂರಿನ ವಿಧಾನ ಸೌಧ ಮತ್ತು ವಿಕಾಸ ಸೌಧದ ನಡುವೆ ಇರುವ 80 ಅಡಿ ಎತ್ತರದ ಗಾಂಧಿ ಪ್ರತಿಮೆಯ ಪ್ರತಿರೂಪವಾಗಿದೆ.
ಇಲ್ಲಿ ಪಕ್ಕದಲ್ಲಿ ಗ್ರಂಥಾಲಯ ಇದ್ದು ಇದಕ್ಕೆ ‘ಚಿಗುರಿದ ಕನಸು’ ಎಂಬ ಕಾದಂಬರಿಯ ಹೆಸರನ್ನು ಇಡಲಾಗಿದ್ದು, ಇದು ಗ್ರಾಮ ಪಂಚಾಯತ್ ಗ್ರಂಥಾಲಯವಾಗಿದ್ದು ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ನಾಡಿನ ಖ್ಯಾತ ಸಾಹಿತಿಗಳ ಕಾದಂಬರಿ, ಕಥೆ, ನಾಟಕ, ಸಾಹಿತ್ಯ, ಗ್ರಂಥಾಲಯ ವಿಜ್ಞಾನ, ಭೌತಶಾಸ್ತ್ರ, ಇಂಜಿನಿಯರಿಂಗ್, ರಸಾಯನಶಾಸ್ತ್ರ, ತಂತ್ರಜ್ಞಾನ, ಜೀವಶಾಸ್ತ್ರ, ಖನಿಜಶಾಸ್ತ್ರ, ಸಸ್ಯಶಾಸ್ತ್ರ, ಕೃಷಿವಿಜ್ಞಾನ, ಪ್ರಾಣಿವಿಜ್ಞಾನ, ವೈದ್ಯಕೀಯ, ಉಪಯುಕ್ತ ಕಲೆ, ಯಕ್ಷಗಾನ, ಆಧ್ಯಾತ್ಮಿಕ, ಲಲಿತಕಲೆ, ಸಾಹಿತ್ಯ, ಸಣ್ಣಕಥೆ, ಕವನ, ಪ್ರವಾಸಕಥನ, ಭಾಷಾಶಾಸ್ತ್ರ, ಧರ್ಮಶಾಸ್ತ್ರ, ತತ್ತ್ವಶಾಸ್ತ್ರ, ಮನಶಾಸ್ತ್ರ, ಶಿಕ್ಷಣ, ಭೂಗೋಳಶಾಸ್ತ್ರ, ಇತಿಹಾಸ, ರಾಜಕೀಯ,ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಕಾನೂನು, ನಿಘಂಟುಗಳು, ವಚನಗಳು, ರಸಪ್ರಶ್ನೆ, ಮಹಾಭಾರತ, ರಾಮಾಯಣ, ಭಗವದ್ಗೀತೆ, ಯೋಗಗಳು, ಪ್ರಬಂಧ ಮತ್ತು ಭಾಷಣಗಳು, ಮಕ್ಕಳ ಕಥೆಗಳು, ಗಾದೆ ಮತ್ತು ಒಗಟು, ಜೀವನ ಚರಿತ್ರೆ, ನಗೆಹೊನಲು, ಜ್ಞಾನಪೀಠ ಪ್ರಶಸ್ತಿ ವಿಜೇತರ ಕೃತಿಗಳು ಹಾಗೂ ಇತರ ಹೆಸರಾಂತ ಸಾಹಿತಿಗಳ ಕೃತಿಗಳು ಸೇರಿದಂತೆ ಸುಮಾರು 10,000 ಕ್ಕೂ ಮಿಕ್ಕಿ ಅಮೂಲ್ಯ ಪುಸ್ತಕ ಭಂಡಾರವನ್ನು ಹೊಂದಿದೆ. ಅಲ್ಲದೆ ಇಲ್ಲಿರುವ ಪುಸ್ತಕವನ್ನು ಜೋಡಿಸಿಟ್ಟ ಪರಿ ಅತ್ಯಂತ ವ್ಯವಸ್ಥಿತವಾಗಿದೆ. ರಾಜ್ಯ ಗ್ರಾಮ ಪಂಚಾಯತ್ ವ್ಯವಸ್ಥೆಯ ಗ್ರಂಥಾಲಯಗಳಲ್ಲಿಯೇ 2ನೇ ಸ್ಥಾನದಲ್ಲಿ ಈ ಗ್ರಂಥಾಲಯ ಎನ್ನುವುದು ಹೆಮ್ಮೆಯ ವಿಚಾರ. ಇಲ್ಲಿ ಬರುವ ಜ್ಞಾನಾಥರ್ಿಗಳ ಜ್ಞಾನದಾಹವನ್ನು ನೀಗುತ್ತಿದೆ. ಇಷ್ಟೆ ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಈ-ಗ್ರಂಥಾಲಯ’ ವನ್ನು ಹೊಂದಿದ್ದು, ಆಧುನಿಕ ಜಗತ್ತಿನ ಓಟಕ್ಕೆ ಸರಿಸಮನಾದ ಸ್ಪಧರ್ೆ ನೀಡುವಲ್ಲಿ ಇಲ್ಲಿನ ಗ್ರಂಥಾಲಯ ಶಕ್ತವಾಗಿದೆ ಎನ್ನುವುದು ಹೆಮ್ಮೆಯ ವಿಚಾರ.
ಎಲ್ಲ ಮಗಲುಗಳನ್ನು ನೋಡಿದ ನೀವು ಮೇಲಂತಸ್ತಿನಿಂದ ಹೊರಗಿನ ಆವರಣವನ್ನು ನೋಡಿ. ನಿಶ್ಯಬ್ಧ ಪ್ರಕೃತಿ ಮಡಿಲಲ್ಲಿ ಸುಂದರವಾದ ಕಾರಂತ ಥೀಂ ಪಾಕರ್್ ಹೊರಾಂಗಣದ ಸೌಂದರ್ಯವನ್ನು ಸವಿಯಲು ಹಿತವೆನಿಸುತ್ತದೆ. ವಿಶಾಲವಾದ ಹುಲ್ಲುಹಾಸು, ಕೆರೆ, ಕಾರಂತರ ಕಂಚಿನ ಮೂರ್ತಿ, ಕೆರೆ ಸುತ್ತಲಿನ ವಿಶ್ರಾಂತಿ ದಿಬ್ಬ ಎಲ್ಲವು ಸೋಜಿಗವಾಗಿ ಕಾಣುತ್ತದೆ. ಮನಸ್ಸು ತುಂಬಿ ಬರುತ್ತದೆ. ಕಾರಂತರಿಗೆ ಹುಟ್ಟೂರಿನ ಈ ಸ್ಮಾರಕ ಅವರ ಗೌರವ ಸೂಚಕವಾಗಿ ಬೆಳೆದು ನಿಂತಿದೆ.