ಕಾರಂತರ ಆಸಕ್ತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಪ್ರತಿವರ್ಷ ‘ಕಾರಂತ ಹುಟ್ಟೂರ ಪ್ರಶಸ್ತಿ’ಯನ್ನು ನೀಡಲಾಗುತ್ತದೆ. ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಜಂಟಿಯಾಗಿ ಈ ಪ್ರಶಸ್ತಿಯನ್ನು ಕೊಡಮಾಡುತ್ತದೆ. ಕೋಟದ ಸಮಸ್ತ ಜನತೆಯ ಎದುರಿನಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಗೌರವ ಪೂರ್ವಕವಾಗಿ ಬಹಳ ವಿಜೃಂಭಣೆಯಿಂದ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ.
2005 – ವೀರಪ್ಪ ಮೊಯ್ಲಿ
2006 – ವೆಂಕಟಾಚಲ
2007 – ಪ್ರೊ. ಕೆ.ಆರ್. ಹಂದೆ
2008 – ರವಿ ಬೆಳಗೆರೆ
2009 – ಚಿಟ್ಟಾಣಿ ರಾಮಚಂದ್ರ ಹೆಗಡೆ
2010 – ಗಿರೀಶ್ ಕಾಸರವಳ್ಳಿ
2011 – ಸಾಲು ಮರದ ತಿಮ್ಮಕ್ಕ
2012 – ಜಯಶ್ರೀ
2013 – ಮೋಹನ ಆಳ್ವ
2014 – ಜಯಂತ್ ಕಾಯ್ಕಿಣಿ
2015 – ಸದಾನಂದ ಸುವರ್ಣ
2016 – ಡಾ| ಬಿ. ಎಂ. ಹೆಗ್ಡೆ
2017 – ಶ್ರೀ ಪ್ರಕಾಶ್ ರೈ
2018 – ಶ್ರೀ ಪಡ್ರೆ
ಓದುಗರೇ, ಕಾರಂತ ಥೀಂ ಪಾರ್ಕ್ ಒಳಹೊರವನ್ನು ತಿಳಿದುಕೊಂಡ ನೀವು ಕೋಟ ಡಾ| ಶಿವರಾಮ ಕಾರಂತರ ಬಗ್ಗೆ ತಿಳಿಯಲೇ ಬೇಕು.
ಕೋಟ ಶಿವರಾಮ ಕಾರಂತರ ಜನ್ಮ ಭೂಮಿ ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಪುಟ್ಟ ಗ್ರಾಮ 1902 ಅಕ್ಟೋಬರ್ 10 ರಂದು ಬ್ರಾಹ್ಮಣ ಕುಟುಂಬದಲ್ಲಿ ಶೇಷಕಾರಂತ ಮತ್ತು ಲಕ್ಷ್ಮೀ ಕಾರಂತ ದಂಪತಿಯ ನಾಲ್ಕನೇ ಪುತ್ರರಾಗಿ ಜನಿಸಿದವರು ಕೋಟ ಶಿವರಾಮ ಕಾರಂತರು. ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದು, ಯಕ್ಷಗಾನ ಪ್ರಸಂಗ ರಚನೆಕಾರರಾಗಿದ್ದು ಮಳಲಿ ಸುಬ್ಬರಾಯರ ಗರಡಿಯಲ್ಲಿ ಯಕ್ಷಗಾನದ ಒಳ- ಹೊರ ತಿರುಳುಗಳನ್ನು ಕಲಿತ ಕಾರಂತರು ಯಕ್ಷಗಾನವನ್ನು ರಾಜ್ಯ ಅಷ್ಟೇ ಅಲ್ಲದೆ ದೇಶ -ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಹರಡಿದರು. ಯಕ್ಷಗಾನದ ಹಿಮ್ಮೇಳದಲ್ಲಿ ಹೊಸ ಹೊಸ ಸಂಗೀತ ವಾದ್ಯಗಳ ಪರಿಕರಗಳನ್ನು ಅಳವಡಿಸಿ ತನ್ನದೇ ಆದ ವಿಶಿಷ್ಠ ಛಾಪನ್ನು ಮೂಡಿಸಿದರು. ಕರಾವಳಿ ಮತ್ತು ಮಲೆನಾಡಿನಾದ್ಯಂತ ಓಡಾಡಿ ‘ತಾಳೆ ಓಲೆ’ಗಳನ್ನು ಸಂಗ್ರಹಿಸಿ ‘ಯಕ್ಷಗಾನ ಬಯಲಾಟ’ ಎಂಬ ಮಹತ್ತರವಾದ ಗ್ರಂಥಗಳನ್ನು ರಚಿಸಿದರು. ಇದಕ್ಕೆ ‘ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ಬಂದಿರುತ್ತದೆ.
ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರಾಗಿದ್ದ ಕಾರಂತರು ಸಾಹಿತ್ಯದ ಕರ್ಮಭೂಮಿಯನ್ನಾಗಿ ಪುತ್ತೂರನ್ನು ಆಯ್ಕೆ ಮಾಡಿಕೊಂಡರು. 1934 (36) ರಲ್ಲಿ ಪುತ್ತೂರಿನಲ್ಲಿ ‘ಬಾಲವನ’ವನ್ನು ಸ್ಥಾಪನೆ ಮಾಡಿದರು. ಅಲ್ಲಿಂದಲೇ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದ ಕಾರಂತರನ್ನು ಅನೇಕ ಗೌರವ ಪ್ರಶಸ್ತಿಗಳು ಅರಸಿಕೊಂಡು ಬಂದವು. ‘ಕಡಲ ತಡಿಯ ಭಾರ್ಗವ’, ‘ನಡೆದಾಡುವ ವಿಶ್ವಕೋಶ’, ‘ಸೋಲಿಗೆ ಹೆದರದ ಜಾಯಮಾನ’, ‘ಕ್ರಿಯಾಶೀಲ ಚಿಂತಕ’, ‘ಶತಮಾನ ಕಂಡ ಸಾಹಿತಿ’, ಎಂದೆಲ್ಲ ಕರೆಸಿಕೊಳ್ಳುವ ಕಾರಂತರಿಗೆ 1978 ರಲ್ಲಿ ರಮಾಬಾಯಿ ಜೈನ್ ಎಂಬ ಮಹಿಳೆ ಸ್ಥಾಪಿಸಿದ ‘ಜ್ಞಾನಪೀಠ ಪ್ರಶಸ್ತಿ’ಯನ್ನು ಕಾರಂತರು 1960ರಲ್ಲಿ ರಚಿಸಿದ ‘ಮೂಕಜ್ಜಿಯ ಕನಸುಗಳು’ ಎಂಬ ಕಾದಂಬರಿಗೆ ನೀಡಲಾಗಿದೆ. 1990 ರಲ್ಲಿ ‘ಪಂಪ ಪ್ರಶಸ್ತಿ’ಯನ್ನು ಕಾರಂತರು 1970 ರಲ್ಲಿ ರಚಿಸಿದ ‘ಮೈಮನಗಳ ಸುಳಿಯಲ್ಲಿ’ ಎಂಬ ಕಾದಂಬರಿಗೆ ನೀಡಲಾಗಿದೆ. 1954 ರಲ್ಲಿ ಮೈಸೂರಿನಲ್ಲಿ ನಡೆದ 57 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 1923 ರಲ್ಲಿ ‘ವಸಂತ ಪತ್ರಿಕೆ’ಯನ್ನು ಸ್ಥಾಪಿಸಿ ಪತ್ರಿಕೋದ್ಯಮದಲ್ಲಿ ತನ್ನ ಛಾಪನ್ನು ಮೂಡಿಸಿದರು ಹಾಗೂ ಕಾರಂತರು ಸ್ಥಾಪಿಸಿದ ಇನ್ನೊಂದು ಪತ್ರಿಕೆ ‘ವಿಚಾರವಾಣಿ’.
1952 ರಲ್ಲಿ ‘ಕಿಸಾನ್ ಮಂಜ್ದೂರ್’ ಪಕ್ಷದಿಂದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುತ್ತಾರೆ. ಸೋಲಿಗೆ ಹೆದರದ ಕಾರಂತರು 1989 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾ ಅಣುವಿದ್ಯುತ್ ಸ್ಥಾವರದಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಅದನ್ನು ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಸಂಸತ್ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ. ಅನೇಕ ವಿಶ್ವ ವಿದ್ಯಾಲಯಗಳಿಂದ ‘ಗೌರವ ಡಾಕ್ಟರೇಟ್’ (ಡಿ.ಲಿಟ್) ಪದವಿಗಳು ಇವರನ್ನರಸಿ ಬಂದಿದೆ. 1997 ರಲ್ಲಿ ಹಂಪಿ ವಿಶ್ವ ವಿದ್ಯಾನಿಲಯ ಇವರಿಗೆ ‘ನಾಡೋಜ ಗೌರವ ಡಾಕ್ಟರೇಟ್’ ನೀಡಿ ಗೌರವಿಸಿದೆ.
ಕಾರಂತರು ಸಾಹಿತ್ಯ ಕ್ಷೇತ್ರದಲ್ಲಷ್ಟೇ ಅಲ್ಲದೇ ಸಿನಿಮಾ ಕ್ಷೇತ್ರದಲ್ಲಿಯೂ ಕೈಯಾಡಿಸಿದ್ದಾರೆ. ಚಲನ ಚಿತ್ರ ನಿರ್ಮಾಪಕರಾಗಿ ದುಡಿದ ಕಾರಂತರು ಮೂಕ ಚಲನ ಚಿತ್ರಗಳನ್ನು ನಿಮರ್ಿಸಿದರು. ಇವರು ನಿರ್ಮಿಸಿದ ‘ಚೋಮನ ದುಡಿ’ ಚಲನ ಚಿತ್ರಕ್ಕೆ ರಾಷ್ಟ್ರ ಮಟ್ಟದ ಅತ್ಯುತ್ತಮ ಕಥಾ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಭಾಷಣಾ ಪ್ರಶಸ್ತಿಗಳು ಲಭಿಸಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಹುಲುಸಾದ ಕೃಷಿ ಬೆಳದ ಕಾರಂತರು 47 ಕಾದಂಬರಿಗಳು, 31 ನಾಟಕ ಗ್ರಂಥಗಳು, 6 ಹರಟೆ ವಿಡಂಬನೆಗಳು. 10 ಬಾಲಸಾಹಿತ್ಯಗಳು, 13 ಕ್ಕೂ ಹೆಚ್ಚು ಸೃಜನೇತರ ಕೃತಿಗಳು, ಐಬಿಹೆಚ್ ಪ್ರಕಾಶನ ಬೆಂಗಳೂರು ಇವರ ‘ಅಮರ ಚಿತ್ರಕಥೆ’ ಮಾಲೆಯ ಸುಮಾರು 85ಕ್ಕೂ ಹೆಚ್ಚು ಕನ್ನಡ ಅನುವಾದ ಮಾಡಿದರು. ಹಾಗೂ ಚತುರಂಗ ಕಥೆ ಕನ್ನಡ ಅನುವಾದ 46ಕ್ಕೂ ಹೆಚ್ಚು ಮತ್ತು ‘ಇಕೊ’ ಪುಸ್ತಕ ಮಾಲೆಯ ಅನುವಾದ 14, ಕಾರಂತರ ಸಂಪಾದಕತ್ವದ ಇಕೊ ಪುಸ್ತಕಗಳು 43ಕ್ಕೂ ಹೆಚ್ಚು ವಯಸ್ಕರ ಶಿಕ್ಷಣ ಕೃತಿಗಳು8, ವಿಜ್ಞಾನ ಅದ್ಭುತ ಜಗತ್ತು 8, ಕಲಾ ಪ್ರಬಂಧ 11, ಪ್ರವಾಸ ಕಥನ 6, ಜೀವನ ಚರಿತ್ರೆ ಮತ್ತು ಆತ್ಮಕಥನ 9, ಸಹಾಯಕ ಸಾಹಿತ್ಯ ನಿಘಂಟು ‘ಸಿರಿಗನ್ನಡ ಅರ್ಥಕೋಶ’ ವಿಶ್ವಕೋಶ 8, ಬಿಡಿ ಬರಹಗಳು, (ಸಂಪುಟಗಳಲ್ಲಿ 8) ಸಂಪಾದಿತ ಕೃತಿಗಳು 3, ಪತ್ರಿಕೆಗಳು 2 ವಸಂತಕನ್ನಡ ಪತ್ರಿಕೆ ಮತ್ತು ವಿಚಾರವಾಣಿ ಅನುವಾದಗಳು ಸಾಹಿತ್ಯಕ 3, ಸಾಹಿತ್ಯೇತ್ತರ 14, ಮತ್ತು ಆಂಗ್ಲ ಭಾಷೆಯಲ್ಲಿ 6 ಕೃತಿಗಳನ್ನು ರಚಿಸಿದ್ದಾರೆ. ಹೀಗೆ 500ಕ್ಕೂ ಹೆಚ್ಚು ಸಾಹಿತ್ಯ, ಸಾಹಿತ್ಯೇತ್ತರ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ ಕಾರಂತರಿಗೆ ‘ಕಾರಂತರ ಸಾಃಇತ್ಯವೆಲ್ಲಾ ಕನ್ನಡದಲ್ಲಿವೆ ಎಂಬ ಕಾರಣಕ್ಕೆ ‘ನೊಬೆಲ್ ಪ್ರಶಸ್ತಿ’ ಬರಲಿಲ್ಲ. ಅವರಷ್ಟು ಬರೆದವರು ವಿರಳ; ಅವರಷ್ಟು ದುಡಿದವರು ವಿರಳ.
1936 ರ ಮೇ 6ರಂದು ಲೀಲಾ ಅವರನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡ ಕಾರಂತರಿಗೆ, ಹರ್ಷ, ಕ್ಷಮಾ, ಉಲ್ಲಾಸ, ಮಾಲವಿಕ ಎಂಬ ನಾಲ್ಕು ಮಕ್ಕಳ ತುಂಬು ಸಂಸಾರದ ಬಾಳ ಬಂಡಿಯನ್ನು ನಡೆಸಿದ ಕಾರಂತರು 1997 ಡಿಸೆಂಬರ್ 9 ರಲ್ಲಿ ಕಾಲನ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆಯನ್ನು ಮುಗಿಸಿದರು. ಸಾಹಿತ್ಯ ಲೋಕದ ದಿಗ್ಗಜಕೊಂಡಿಯೊಂದು ಕಳಚಿತು. ಸಾಹಿತ್ಯ ಲೋಕದಲ್ಲಿ ತುಂಬಲಾರದ ನಷ್ಟವಾಗಿ ತೋರಿತು. ರಂದು ಇವರ ಪಾರ್ಥಿವ ಶರೀರವನ್ನು ಇವರ ಜನ್ಮಭೂಮಿಯಾದ ಕೋಟದ ಸ್ವಗೃಹದಲ್ಲಿ ಸಕಲ ಸರಕಾರಿ ಗೌರವದೊಂದೊಗೆ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಇಡೀ ಕರ್ನಾಟಕ ರಾಜ್ಯ ಮೂರು ದಿನಗಳ ಕಾಲ ಶೋಕಾಚರಣೆಯ ಮೂಲಕ ಅಗಲಿದ ಕಾರಂತರ ದಿವ್ಯ ಆತ್ಮಕ್ಕೆ ಶಾಂತಿಕೋರಿದರು. ಕಡಲ ತಡಿಯ ಭಾರ್ಗವ ನಡೆದಾಡುವ ವಿಶ್ವಕೋಶ ಕಾರಂತರನ್ನು ಕಳೆದುಕೊಂಡ ಕೋಟ ಅಕ್ಷರಶಃ ಸೊರಗಿದ್ದು ಇತಿಹಾಸ.
ಕಾರಂತ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಿಸಬೇಕು ಎಂಬ ಹಂಬಲ ಕೋಟ ಜನತೆಯದು ಅಂತೆಯೇ 2005ರಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಎಂಬ ಪ್ರಶಸ್ತಿಯನ್ನು ಹುಟ್ಟು ಹಾಕಿ ಕಾರಂತರ ಆಸಕ್ತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು 2008ರಲ್ಲಿ ಕಾರಂತರ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬಂದಿದ್ದ ಅಂದಿನ ಕರ್ನಾಟಕ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಬಿ. ವೈ ಎಸ್. ಯಡಿಯೂರಪ್ಪನವರು 1 ಕೋಟಿ ರೂ.ಗಳನ್ನು ಕಾರಂತ ಸ್ಮಾರಕಕ್ಕೆ ನೀಡುವುದಾಗಿ ಘೋಷಿಸಿದರು ಅಲ್ಲಿಂದ ಮತ್ತೆ ಚಿಗುರೊಡೆದ ಕಾರಂತ ಸ್ಮಾರಕ ನಿರ್ಮಾಣದ ಕನಸು ಅಂದಿನ ವಿಧಾನ ಪರಿಷತ್ ಸದಸ್ಯರು ಕೋಟದವರೆ ಆದ ಕೋಟ ಶ್ರೀನಿವಾಸ ಪೂಜಾರಿಯವರ ಸಹಕಾರದೊಂದಿಗೆ ಸರಿ ಸುಮಾರು 2.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾರಂತ ಥೀಂ ಪಾರ್ಕ್ 12/10/2011 ರಲ್ಲಿ ಲೋಕಾರ್ಪಣೆಗೊಂಡಿತು.
ಅಂದು ನಿರ್ಮಾಣಗೊಂಡ ಕಾರಂತ ಥೀಂ ಪಾರ್ಕ್’ನ ಒಡಲು ಖಾಲಿ ಖಾಲಿಯಾಗಿತ್ತು. ಆದರೆ ಅದರ ಒಡಲನ್ನು ತುಂಬುವಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರ ಕಾರ್ಯ ಇಂದಿಗೂ ಮುಂದುವರಿದಿರುವುದು ಶ್ಲಾಘನೀಯ. ಕಾರಂತ ಥೀಂ ಪಾರ್ಕ್ ಇಂದು ಸ್ವಚ್ಛವಾಗಿ ಹಾಗೂ ಸುಂದರವಾಗಿ ತಲೆಯೆತ್ತಿ ನಿಂತಿದೆ. ಕಲಾರಸಿಕರನ್ನು, ಸಾಹಿತ್ಯಾಭಿಮಾನಿಗಳನ್ನು, ಕಾರಂತಾಭಿಮಾನಿಗಳನ್ನು, ತನ್ನತ್ತ ಸೆಳೆಯುವಲ್ಲಿ ಕೋಟದ ಜನತೆ, ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕಾರಂತ ಥೀಂ ಪಾಕರ್್ನ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಈ ಕಾರಂತ ಥೀಂ ಪಾಕರ್್ನ ಮೂಲಕ ಕಾರಂತರ ಹೆಸರನ್ನು ಅಜರಾಮರವಾಗಿಸಲು ಸಹಕರಿಸಿದ ಸರಕಾರಕ್ಕೂ, ಜನಪ್ರತಿನಿಧಿಗಳಿಗೂ, ಹಾಗೂ ಊರ ಜನತೆಗೆ ವಂದನೆಗಳನ್ನು ಹೇಳಲೇಬೇಕಾಗಿದೆ.
ಕಾರಂತರ ಕಾಯ ಅಳಿಯಿತು ಕಾರಂತರು ಅಳಿಯಲಿಲ್ಲ ಮತ್ತೆ ಇಲ್ಲಿ ತಲೆಯೆತ್ತಿ ನಿಂತಿದ್ದಾರೆ. ಕೋಟ ಜನತೆಯ ಕಾರಂತರ ಬಗೆಗಿನ ಹಂಬಲ ಮತ್ತು ಆಶಯ ಕಾರಂತ ಥೀಂ ಪಾಕರ್್ನ ಮೂಲಕ ಸಹಕಾರಗೊಂಡಿದೆ. ಈ ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯಲಿ ಎಂಬ ಹಾರೈಕೆಯೊಂದಿಗೆ
ಒಂದು ಕಾಲದಲ್ಲಿ ಕೊಳಕೆರೆಯಾಗಿದ್ದ ಈ ಪ್ರದೇಶ ಇಂದು ಕಾರಂತ ಥೀಂ ಪಾರ್ಕ್ ಆಗಿ ಎಲ್ಲರ ಮನ ಸೆಳೆಯುತ್ತಿದೆ. ಈ ಪ್ರದೇಶವು ಕಲ್ಮಾಡಿ ರಸ್ತೆಯಿಂದ ಬಾರಿಕೆರೆ ಸಂಪರ್ಕಿಸುವ ಹಾದಿಯ ಮಧ್ಯದಲ್ಲಿದ್ದು ಇನ್ನೊಂದು ಸಂಪರ್ಕ ರಸ್ತೆ ಅಮೃತೇಶ್ವರೀ ದೇವಸ್ಥಾನ ಮತ್ತು ವರುಣ ತೀರ್ಥ ಕೆರೆಯ ಮಾರ್ಗವಾಗಿ ಇಲ್ಲಿ ಸೇರುತ್ತದೆ. ಹಿಂದಿನ ಕಾಲದಲ್ಲಿ ಈ ಕೆರೆಯ ನೀರನನು ಕೃಷಿಗೆ ಉಪಯೋಗಿಸುತ್ತಿದ್ದರು. ಸುಗ್ಗಿ ಬೆಳೆ ಮತ್ತು ಕೊಳ್ಕೆ ಬೆಳೆ, ಬೆಳೆಯಲು ಇಲ್ಲಿನ ತಗ್ಗು ಪ್ರದೇಶದ ಗದ್ದೆ ಬಯಲುಗಳಿಗೆ ಈ ಕೊಳ್ಕೆರೆಯ ನೀರೆ ಆಧಾರ. ಸಮೃದ್ಧವಾದ ನೀರಿನ ಆಗರವಾಗಿತ್ತು ಈ ಕೆರೆ. ಕೊಳ್ಕೆ ಕೃಷಿಗೆ ಇಲ್ಲಿನ ನೀರು ಸಿಗುತ್ತಿದ್ದ ಕಾರಣ ಜನರು ಈ ಕೆರೆಯನ್ನು ‘ಕೊಳಕೆ ಕೆರೆ’ ಎಂದು ಕರೆಯತೊಡಗಿದರು. ಕ್ರಮೇಣ ಜನರ ಬಾಯಿಯಲ್ಲಿ ‘ಕೊಳ್ಕೆರೆ’ಯಾಗಿ ಮಾರ್ಪಟ್ಟಿತು. ಅಂದು ತಗ್ಗು ಪ್ರದೇಶದ ಕೃಷಿಭೂಮಿಯ ನೀರಿನ ದಾಹವನ್ನು ಸೀಗುತ್ತಿದ್ದ ಈ ಕೆರೆ ಕಾಲಕ್ರಮೇಣ ಕೃಷಿಯು ಕಡಿಮೆಯಾಗಿ, ಕೆರೆಯ ‘ಹೂಳು’ ಎತ್ತದೆ ಕಸ -ಗಂಟಿಗಳು ಬೆಳೆದು ಕೊಳ್ಕೆರೆಹೋಗಿ ‘ಕೊಳಚೆ ಕೆರೆ’ಯಾಗಿ ಮಾರ್ಪಟ್ಟಿತು. ಸುತ್ತ ಮುತ್ತಲಿನ ಕಸ ಕಡ್ಡಿಗಳು, ತ್ಯಾಜ್ಯಗಳು, ಇಲ್ಲಿ ಬಂದು ಬೀಳತೊಡಗಿತು. ಕ್ರಮೇಣ ಕೆರೆಯ ಬಲಭಾಗದ ದಂಡೆಯಲ್ಲಿ ಶವ ಸಂಸ್ಕಾರ ಮಾಡಲು ಉಪಯೋಗಿಸುತ್ತಿದ್ದರು. ಒಟ್ಟಾರೆಯಾಗಿ ಸಮೃದ್ಧ ಜಲಮೂಲವಾಗಿದ್ದ ಈ ಪ್ರದೇಶ ಸ್ಮಶಾನವಾಗಿ, ತಿಪ್ಪೆಗುಂಡಿಯಾಗಿದ್ದು ವಿಷಾದಕರ ಸಂಗತಿ. ಆದರೆ ಕೋಟತಟ್ಟು ಗ್ರಾಮ ಪಂಚಾಯತ್ನ ಮುಂದಾಲೋಚನೆಯಿಂದಾಗಿ ಇಂದು ಇಲ್ಲಿ ಕಾರಂತ ಥೀಂ ಪಾರ್ಕ್’ನ ನಿರ್ಮಾಣ ಮಾಡಿ ಈ ಜಾಗ ಡಂಫಿಂಗ್ ಯಾರ್ಡ ಆಗುವುದನ್ನು ತಪ್ಪಿಸಿದೆವು. ಹಾಗೂ ಕಾರಂತ ಥೀಂ ಪಾರ್ಕ್ ಹಿಂಭಾಗದಲ್ಲಿ ಒಂದು ಬಾವಿ ನಿರ್ಮಾಣ ಮಾಡಿ ಕೋಟತಟ್ಟು ಗ್ರಾಮ ಪಂಚಾಯತ್ನ ಬಹುಭಾಗಕ್ಕೆ ಕುಡಿಯುವ ನೀರಿನ ಸರಬರಾಜು ಮಾಡಿರುತ್ತೇವೆ. ಅಂದು ಕೃಷಿ ಭೂಮಿಯ ದಾಹ ನೀಡುತ್ತಿದ್ದ ಈ ಕೆರೆ ಇಂದು ಬಾವಿಯಾಗಿ ಊರಿನ ದಾಹ ನೀಗುತ್ತಿರುವುದು ಸಂತೋಷಕರ ಬೆಳವಣಿಗೆ.