ಡಾ.ರಮೇಶ್ ಅರವಿಂದ್ ಪ್ರಾಯೋಜಿತ ದತ್ತಿ ಪುರಸ್ಕಾರಕ್ಕೆ ಶ್ರೀಪೃಥ್ವೀಶ್ ಕೆ,
ಶ್ರೀ ರವೀಂದ್ರ ಶೆಟ್ಟಿ ತಂತ್ರಾಡಿ ಆಯ್ಕೆ
ಕೋಟ : ಚಿತ್ರನಟ ಡಾ.ರಮೇಶ್ ಅರವಿಂದ್ ಪ್ರಾಯೋಜಿತ ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ಉದಯೋನ್ಮುಖ ಸಾಧಕರಿಕೆ ನೀಡುವ ದತ್ತಿ ಪುರಸ್ಕಾರಕ್ಕೆ ರೂಬಿಕ್ ಕ್ಯುಬ್ ಗಿನ್ನಿಸ್ ದಾಖಲೆಗಾರ ನಾವೀನ್ಯ ರೂಪಕ ಪ್ರತೀಕ ಶ್ರೀ ಪೃಥ್ವೀಶ್ ಕೆ ಚೇರ್ಕಾಡಿ ಹಾಗೂ ಕಿರುಚಿತ್ರಗಳ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆ-ಸಂಭಾಷಣೆಗಾರ, ಸಾಹಿತಿ ಶ್ರೀ ರವೀಂದ್ರ ಶೆಟ್ಟಿ ತಂತ್ರಾಡಿ ಅವರನ್ನು ಆಯ್ಕೆ ಮಾಡಲಾಗಿದ್ದು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜುಲೈ 21 ರಂದು ಸಂಜೆ 5 ಗಂಟೆಗೆ ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಸಲಾಗುವುದೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಕೆ ಸತೀಶ್ ಕುಂದರ್, ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.