ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡ ಮಾಡುವ ಸಾಂಸ್ಕೃತಿಕ ಚಿಂತಕ ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಸ್ಮಾರಕ ಪುರಸ್ಕಾರಕ್ಕೆ ರಂಗತಜ್ಞ ಶ್ರೀ ರಾಮಚಂದ್ರ ಐತಾಳ್ ಗುಂಡ್ಮಿ ಹಾಗೂ ನಟ, ನಿರ್ದೆಶಕ, ನಿರ್ಮಾಪಕ ಶ್ರೀ ರಾಘವೇಂದ್ರ ಕುಲಾಲ್ರವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಲಾಗಿದೆ.
ನಾಟಕ, ಯಕ್ಷಗಾನ ಮಕ್ಕಳ ರಂಗಭೂಮಿ ತರಬೇತಿಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಾಮಾಜಿಕ ಚಿಂತಕರಾಗಿರುವ ರಾಮಚಂದ್ರ ಐತಾಳ್ ಗುಂಡ್ಮಿ, ಹಾಗೂ ಗ್ರಾಮೀಣ ಪರಿಸರದಲ್ಲಿದ್ದುಕೊಂಡು ಸದಭಿರುಚಿಯ ಗ್ರಾಮೀಣ ಸೊಗಡಿನ ಚಲನಚಿತ್ರ ಕಿರುಚಿತ್ರವನ್ನು ನಿರ್ಮಿಸುತ್ತಿದ್ದು ಮಕ್ಕಳಿಗಾಗಿ ವಿಶೇಷ ತರಬೇತಿ ಕೇಂದ್ರಗಳನ್ನು ಆರಂಭಿಸಿರುವ ಶ್ರೀ ರಾಘವೇಂದ್ರ ಕುಲಾಲ್ರವರಿಗೆ ಜೂನ್ 30 ರಂದು ಸಂಜೆ 4ಕ್ಕೆ ಪುರಸ್ಕಾರ ಪ್ರದಾನ ಮಾಡಲಾಗಿದೆ ಹಾಗೂ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.