ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕಾರಂತ ಪ್ರತಿಷ್ಠಾನ(ರಿ.) ಕೋಟ ಇವರ ಆಶ್ರಯದಲ್ಲಿ ಡಾ|| ಶಿವರಾಮ ಕಾರಂತ ಜನ್ಮದಿನೋತ್ಸವ ಅಂಗವಾಗಿ ನಡೆಯುವ ಸಾಹಿತ್ಯಿಕ -ಸಾಂಸ್ಕೃತಿಕ ಸುಗ್ಗಿ ಹಾಗೂ 14ನೇ ವರುಷದ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪೋಸ್ಟರ್ ನ್ನು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ರಘು ತಿಂಗಳಾಯ ಬಿಡುಗಡೆಗೊಳಿಸಿ ಎಲ್ಲರ ಸಹಕಾರ ಕೋರಿದರು.
14ನೇ ವರುಷದ ಕಾರ್ಯಕ್ರಮಕ್ಕೆ ಅತೀತ-2018 (ಬೆಡಗಿನ ಬೆರಗು) ನಾಮಂಕಿತದೊಂದಿಗೆ 10 ದಿನಗಳು ಕಾರಂತ ಥೀಮ್ ಪಾರ್ಕ್ ನಲ್ಲಿ ಕಾರ್ಯಕ್ರಮ ಮಾಡಲಾಗುವುದೆಂದು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷ ಎಚ್ ಪ್ರಮೋದ್ ಹಂದೆ ಉಪಾಧ್ಯಕ್ಷ ಲೋಕೇಶ್ ಶೆಟ್ಟಿ,ಆಯ್ಕೆ ಸಮಿತಿಯ ಸದಸ್ಯ ಯು ಎಸ್ ಶೆಣೈ ಹಾಗೂ ಪಂಚಾಯತ್ ಮತ್ತು ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.