ಕೋಟ: ಕೋಟತಟ್ಟು ಗ್ರಾ.ಪಂ., ಡಾ| ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಕೋಟ ಸಾರಥ್ಯದಲ್ಲಿ, ಡಾ|ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದೊಂದಿಗೆ ಅ.1ರಿಂದ 10ರವರೆಗೆ ಕೋಟ ಕಾರಂತ ಕಲಾಭವನದಲ್ಲಿ ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಅವರು ಮಂಗಳವಾರ ಬ್ರಹ್ಮಾವರ ಪ್ರೆಸ್ ಕ್ಲಬ್ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.
ಕಾರ್ಯಕ್ರಮದ ವಿವರ:-
ಅ.1ರಂದು ಅಪರಾಹ್ನ 3ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನಡೆಯಲಿದ್ದು, ರಾಜ್ಯ ಸಂಪನ್ಮೂಲ ವ್ಯಕ್ತಿ ವಿಟ್ಠಲ ನಾಯಕ್ ದಿಕ್ಸೂಚಿ ಭಾಷಣಗೈಯಲಿದ್ದಾರೆ. ಸಂಜೆ 6ಕ್ಕೆ ಗಾನ ವೈಭವ ನೃತ್ಯ-ಗಾನ ನಮನ ನಡೆಯಲಿದೆ. ಅ.2ರಂದು ಸಂಜೆ 6ಕ್ಕೆ ರಾಜ್ಯ ಮಟ್ಟದ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನಡೆಯಲಿದ್ದು, ಖ್ಯಾತ ಚಿತ್ರ ನಿರ್ದೇಶಕ ರವಿ ಬಸ್ರೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಕಟಕ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ಅ.3ರಂದು ಸಂಜೆ 6ಕ್ಕೆ ಜಿ| ಮೂರ್ತಿ ನಿರ್ದೇಶನದ ಅರಳುವ ಹೂಗಳು ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಅ.4ರಂದು ಸಂಜೆ 6ಕ್ಕೆ ಹಜ್ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಅ.5ರಂದು ಕರುನಾದ ಶಾಲೆ ಚಲನಚಿತ್ರ ಪ್ರದರ್ಶನ, ಅ. 6ರಂದು ಕಿರುಚಲನಚಿತ್ರಗಳ ಸ್ಪರ್ಧೆ ನಡೆಯಲಿದೆ. ಖ್ಯಾತ ನಿರ್ದೇಶಕ ಜಿ. ಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ವಿವಿಧ ಕಿರುಚಿತ್ರಗಳ ಪ್ರದರ್ಶನ ಮತ್ತುಸ್ಪರ್ಧೆ ನಡೆಯಲಿದೆ. ಅ.7ರಂದು ಸಂಜೆ 4ಕ್ಕೆ ಖ್ಯಾತ ಹಾಸ್ಯಪಟು ಜಿ.ಗುಂಡು ರಾವ್ ಅವರಿಂದ ಹರಟೆ ಜೀವನದ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಕತ್ತಲೆಕೋಣೆ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಅ.8ರಂದು ಕಾರಂತ ನಮನ ನೃತ್ಯ ವೈಭವ ನಡೆಯಲಿದೆ. ಅ.9ರಂದು ಕಾರಂತ ನಮನ ಅಕ್ಷರ ಪ್ರತಿಷ್ಠಾನದಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.
ಅ.10ರಂದು ಸಂಜೆ 3.30ಕ್ಕೆ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಜಲ ಮತ್ತು ಪರಿಸರ ತಜ್ಞ ಶ್ರೀಪಡ್ರೆಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ, ಸಂಸದೆ ಶೋಭ ಕರಂದ್ಲಾಜೆ, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಪ್ರತಾಪ್ಚಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಅನಂತರ ಯಕ್ಷಗಾನ ನಾಟ್ಯ ವೈಭವ ಜರಗಲಿದೆ. ಈ ಎಲ್ಲಾ ಕಾರ್ಯಕ್ರಮಗಳು ಪ್ರತಿ ದಿನ ಸ್ಥಳೀಯ ಸಂಘ-ಸಂಸ್ಥೆಗಳು ಸಹಕಾರದೊಂದಿಗೆ ನಡೆಯಲಿದೆ ಎಂದು ತಿಳಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ, ಕೋಟತಟ್ಟು ಗ್ರಾ.ಪಂ. ಪಿ.ಡಿ.ಒ. ಸುಜಾತ ಲಕ್ಕಪ್ಪನವರ್, ಪ್ರತಿಷ್ಠಾನದ ಸದಸ್ಯ ಸುಬ್ರಾಯ ಆಚಾರ್ಯ, ಸತೀಶ್ ವಡ್ಡರ್ಸೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.