ಕೋಟ: ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ದಿ.ಮಂಜುನಾಥ ಕೋಟ ಸ್ಮಾರಕ ಸಾಂಸ್ಕೃತಿಕ ಪುರಸ್ಕಾರಕ್ಕೆ ಗಾಯಕ,ಸಂಗೀತ -ನಿರ್ದೇಶಕ ವಿವೇಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀ ರವಿ ಕಾರಂತ್ ಹಾಗೂ ನಟನಿರ್ದೇಶಕ-ಶ್ರೀ ಆಲ್ವಿನ್ ಅಂದ್ರಾದೆ ಅವರಿಗೆ ನೀಡಲು ಸಮಿತಿ ನಿರ್ಧರಿಸಿದೆ.ಇದೇ ತಿಂಗಳ 27 ರಂದು ಸಂಜೆ 6 ಗಂಟೆಗೆ ಕೋಟ ಕಾರಂತ ಥೀಮ್ ಪಾರ್ಕ್ ನಲ್ಲಿ ಪುರಸ್ಕಾರ ಹಸ್ತಾಂತಿಸಲಾಗುವುದು. ಪುರಸ್ಕಾರ ಕಾರ್ಯಕ್ರಮದ ನಂತರ ಭೂಮಿಕ(ರಿ) ಹಾರಾಡಿ ಇವರಿಂದ ಕಾತ್ಯಾಯಿನಿ ಎಂಬ ನಾಟಕ ಪ್ರದರ್ಶನ ನಡೆಯಲಿದೆ ಎಂದು ಅಧ್ಯಕ್ಷ ಶ್ರೀ ರಘು ತಿಂಗಳಾಯ, ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.