ಕೋಟ: ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ|| ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡ ಮಾಡುವ ಖ್ಯಾತ ಯಕ್ಷಗಾನ ಸ್ತ್ರೀ ವೇಷದಾರಿ ದಿ.ಕೋಟ ವೈಕುಂಠ ಯಕ್ಷಸೌರಭ ಪುರಸ್ಕಾರಕ್ಕೆ ಉಪನ್ಯಾಸಕ, ಯಕ್ಷ ಕಲಾವಿದ ವಿಶ್ವ ವಿಖ್ಯಾತ ಮಕ್ಕಳ ಮೇಳದ ಸಂಚಾಲಕ ಕವಿ ಹೃದಯದ ಸಾಂಸ್ಕೃತಿಕ ರಾಯಭಾರಿ ಯಕ್ಷಗಾನವನ್ನು ವಿದೇಶಗಳಿಗೆ ಕರೆದೊಯ್ದು ಜಗದಗಲಕ್ಕೆ ಹರಡಿದ ಶ್ರೀಸುಜಯೀಂದ್ರ ಹಂದೆಯವರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ.
ಪುರಸ್ಕಾರವನ್ನು ಜೂನ್ 23 ಭಾನುವಾರದಂದು ಅಪರಾಹ್ನ 2 ಗಂಟೆಗೆ ಕಾರಂತ ಥೀಮ್ಪಾರ್ಕ್ ನಲ್ಲಿ ಪ್ರದಾನ ಮಾಡಲಾಗುವುದೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್, ಅಧ್ಯಕ್ಷ ಶ್ರೀರಘು ತಿಂಗಳಾಯ, ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಅಮೋಘ(ರಿ) ಹಿರಿಯಡ್ಕ ಶ್ರೀಮತಿ ಪೂರ್ಣಿಮಾ ಸುರೇಶ್ ಪ್ರಸ್ತುತಿ ಸತ್ಯನಾಪುರದ ಸಿರಿ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಲಿದೆ.