ಕಾರಂತರ ಬದುಕಿನ ಪುಟ ಮೇಲುಕು ಹಾಕಲು ಥೀಮ್ ಪಾರ್ಕ್ ಸಹಕಾರಿ – A SP ಕುಮಾರ್ ಚಂದ್ರ
ಕೋಟ : ಕಾರಂತರು ಯುವ ಜನಾಂಗಕ್ಕೆ ಮಾದರಿಯಾಗಿ ಬದುಕಿ ತೋರಿಸಿದ ಮಹಾ ಚೇತನ, ಅವರ ಬದುಕಿನ ಪುಟ ಮೇಲುಕು ಹಾಕಲು, ಅವರ ಬದುಕು-ಬರಹ ಮುಂದಿನ ಜನಾಂಗಕ್ಕೆ ಪರಿಚಯಿಸಲು ಕೋಟದ ಕಾರಂತ ಥೀಮ್ ಕಾರಂತರ ಬದುಕಿನ ಪುಟ ಮೇಲುಕು ಹಾಕಲು ಥೀಮ್ ಪಾರ್ಕ್ ಸಹಕಾರಿ- ASP ಕುಮಾರ್ ಚಂದ್ರ ಸಹಕಾರಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಶ್ರೀ ಕುಮಾರ್ ಚಂದ್ರ ಅವರು ಹೇಳಿದರು.
ಅವರು ಕೋಟದ ಕಾರಂತ ಥೀಮ್ ಪಾರ್ಕ್ ಭೇಟಿ ನೀಡಿ ಮಾತನಾಡುತ್ತಿದ್ದರು. ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಈ ಸ್ಥಳ ಒಂದು ಸುಂದರ ವೇದಿಕೆ ಎಂದರು. ಅವರು ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ , ಆಟರ್್ ಗ್ಯಾಲರಿ, ಸಭಾಭವನ, ಗ್ರಂಥಾಲಯ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಶೈಲಾ ಎಸ್ ಪೂಜಾರಿ, ಗ್ರಂಥಾಲಯ ಮೇಲ್ವಿಚಾರಕಿ ಶೈಲಜ ಕೆ.ಎನ್ ಪ್ರವಾಸಿ ಮಿತ್ರ ಸುರೇಶ್ , ಥೀಮ್ ಪಾರ್ಕ್ ಸಿಬ್ಬಂದಿ ಸುಜಾತ ಅವರು ಉಪಸ್ಥಿತರಿದ್ದರು. ಥೀಮ್ ಪಾರ್ಕ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

