ಕಾರಂತ ಥೀಮ್ ಪಾರ್ಕ್ ಮೂಲಕ ಕಾರಂತರ ಕನಸು ನನಸು- ಕೋಟ

ಕೋಟ: ಮಕ್ಕಳೆಂದರೆ ಕಾರಂತರಿಗೆ ಅಚ್ಚು ಮೆಚ್ಚು ಮಕ್ಕಳಿಗೋಸ್ಕರ ಬಾಲಪ್ರಪಂಚದಂತಹ ಪುಸ್ತಕಗಳನ್ನು ಬರೆದಿರುವುದು ಮಾತ್ರವಲ್ಲದೇ ಮಕ್ಕಳ ಭೌತಿಕ ವಿಕಸನಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಗಗಳನ್ನು ಕಾರಂತರು ಮಾಡಿದ್ದಾರೆ, ಅದೇ ಪ್ರಕಾರ ಥೀಮ್ ಪಾರ್ಕ್ ನಲ್ಲಿ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆ, ತರಬೇತಿ , ಭೌತಿಕ ವಿಕಸನಕ್ಕೆ ಸಂಬಂಧಿಸಿದ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿರುವುದರಿಂದ ಆಸಕ್ತ ಮಕ್ಕಳ ಕಲಿಯುವಿಕೆಯ ಹಸಿವಿನ ದಾಹ ನೀಗಿಸಿದಂತಾಗುತ್ತದೆ ಎಂದು ಧಾರ್ಮಿಕ ದತ್ತಿ ದ.ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಅವರು ಕೋಟದ ಕಾರಂತ ಥೀಮ್ ನಲ್ಲಿ ಆಡಳಿತ ಕಛೇರಿ ಜಗದೋದ್ದಾರ-ನಾ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರಂತ ಥೀಮ್ ಪಾರ್ಕ್ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದು ಸಂಗೀತ ಕಾರಂಜಿ , ಯುದ್ಧ ವಿಮಾನದಂತಹ ಆಕರ್ಷಣೆ ಮುಂದಿನ ದಿನಗಳಲ್ಲಿ ಅಳವಡಿಸಿ ಕಾರಂತ ಥೀಮ್ ಪಾರ್ಕ್ ನ ಸೊಬಗು ಇನ್ನಷ್ಟು ಹೆಚ್ಚಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕಾರಂತ ಥೀಮ್ ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿ ಪೂಣರ್ಿಮಾ, ಕೋಟತಟ್ಟು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಶ್ರೀರಘು ತಿಂಗಳಾಯ, ಪಿ.ಡಿ.ಓ ಶೈಲಾ ಎಸ್ ಪೂಜಾರಿ , ಟ್ರಸ್ಟಿಗಳಾದ ಸುಬ್ರಾಯ್ ಆಚಾರ್ಯ, ರಾಜಶೇಖರ್, ಗ್ರಂಥಾಲಯ ಮೇಲ್ವಿಚಾರಕಿ ಶೈಲಜಾ ಕೆ ಎನ್, ಮೇಲ್ವಿಚಾರಕ ಪ್ರಶಾಂತ್ ಉಪಸ್ಥಿತರಿದ್ದರು.

