ರಾಜ್ಯ ಮಟ್ಟದ ಆನ್ ಲೈನ್ ಕವನ ವಾಚನ ಸ್ಪರ್ಧೆ ಆಹ್ವಾನ
ಕೋಟ : ಡಾ|| ಕಾರಂತ ಪ್ರತಿಷ್ಠಾನ(ರಿ) ಕೋಟ , ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ ) ಉಡುಪಿ, ರೋಟರಿ ಕ್ಲಬ್ ಕುಂದಾಪುರ (ದಕ್ಷಿಣ) ರಾಜ್ಯದ ಮೊತ್ತ ಮೊದಲ ಆನ್ ಲೈನ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಂಗವಾಗಿ “ ರಾಜ್ಯ ಮಟ್ಟದ ಆನ್ ಲೈನ್ ಕವನ ವಾಚನ ಸ್ಪರ್ಧೆ- ಭಾವನಾ -2020 (ಅನುಪಲ್ಲವಿಯ ಗುಣಗಾನ ) ನಡೆಯಲಿದೆ. ಆಸಕ್ತರು ಭಾಗವಹಿಸಬಹುದಾಗಿದೆ.
ನಿಯಮಗಳು :
- ಸ್ವರಚಿತ ಕವನವನ್ನು ವಾಚಿಸಬಹುದು, ಇತರರ ಕವನವನ್ನೂ ವಾಚಿಸಬಹುದು
- ಮುಕ್ತ ಪ್ರವೇಶ ವಯಸ್ಸಿನ ನಿರ್ಬಂಧವಿಲ್ಲ
- ಕವನ ವಾಚನದಲ್ಲಿ ಕವಿಯ ಹೆಸರು, ಶೀರ್ಷಿಕೆ ಹಾಗೂ ನಿಮ್ಮ ಊರು , ಹೆಸರು ತಿಳಿಸಬೇಕು.
- ಕವನ ವಾಚನ 3 ನಿಮಿಷ ಮೀರಬಾರದು.
- ಮೊಬೈಲ್ ಅಡ್ಡ ಹಿಡಿದು ಚಿತ್ರೀಕರಿಸಬಾರದು.
- ಸ್ಪಷ್ಟವಾಚನ, ಕವನದ ಆಯ್ಕೆ ಭಾವಾಭಿವ್ಯಕ್ತಿ, ಕವನದ ಭಾವಾರ್ಥ ಮೊದಲಾದವುಗಳನ್ನು ಗಮನಿಸಲಾಗುವುದು. ಪರಿಣಾಮಕಾರಿ ವಾಚನವೇ ಪ್ರಧಾನ.
ವಿಡಿಯೋ ಕ ಳುಹಿಸುವ ದಿನಾಂಕ ನವೆಂಬರ್-13, 14 ಮತ್ತು 15 ರಂದು ಮಾತ್ರ ಕಳುಹಿಸಲು ಅವಕಾಶ.
ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ – 7411387566 ಮಾಹಿತಿಗಾಗಿ – 7829729340 ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


