ಶ್ರೀ ಬಿ.ಎಸ್ ರಾಮ್ ಶೆಟ್ಟಿ ಅವರಿಗೆ ದಿ.ಮಂಜುನಾಥ ಕೋಟ ದತ್ತಿ ಪುರಸ್ಕಾರ ಪ್ರದಾನ
ಕಲೆ ಎನ್ನುವುದೇ ಒಂದು ಶಿಕ್ಷಣ-ಬಿ.ಎಸ್ ರಾಮ್ ಶೆಟ್ಟಿ
ಕೋಟ : ಕಲೆ ಎನ್ನುವುದೇ ಒಂದು ಶಿಕ್ಷಣ, ಕಲೆಯಲ್ಲಿ ನಮಗೆ ದೊರಕುವ ಶಿಕ್ಷಣ ಜ್ಞಾನ ಸಂಪತ್ತು ಅಮೋಘವಾದದ್ದು, ರಂಗಭೂಮಿಯಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ನಮ್ಮೊಳಗೆ ಇರುವ ಕಲಾವಿದನ ಅನಾವರಣವಾಗುತ್ತದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳು ಸಮಾಜದ ಕಣ್ಣು ತೆರೆಸುತ್ತದೆ, ಎಂದು ಶ್ರೀ ಬಿ.ಎಸ್ ರಾಮ್ ಶೆಟ್ಟಿ ಅವರು ಹೇಳಿದರು.
ಅವರು ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ)ಕೋಟ, ಡಾ|| ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ದಿ. ಮಂಜುನಾಥ ಕೋಟ ದತ್ತಿ ಪುರಸ್ಕಾರದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಾಂಸ್ಕೃತಿಕ ಚಿಂತಕ ಶ್ರೀ ಶ್ರೀಕಾಂತ್ ಶೆಣೈ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ, ಯಕ್ಷಗಾನ ಭಾಗವತ ಶ್ರೀ ಲಂಬೋದರ ಹೆಗಡೆ, ಯಕ್ಷಗಾನ ಸಂಘಟಕ ಪ್ರಸಾದ್ ಬಿಲ್ಲವ, ,ಕಾರಂತ ಪ್ರತಿಷ್ಠಾನದ ಸದಸ್ಯ ಶ್ರೀ ಸುಬ್ರಾಯ್ ಆಚಾರ್ಯ, ಸಮಾಜ ಸೇವಕ ಸಂತೋಷ್ ಪೂಜಾರಿ ಕದ್ರಿಕಟ್ಟು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿ, ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಶ್ರೀ ಪ್ರಶಾಂತ್ ನಿರೂಪಿಸಿದ