ಸಹಕಾರಿ ಸಂಘಗಳ ಜಂಟಿ ನಿಬಂಧಕ ಕಾರಂತ ಥೀಮ್ ಪಾರ್ಕ್ ಭೇಟಿ
ಕೋಟ : ಜ್ಞಾನಪೀಠ ಪುರಸ್ಕೃತ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ಗೆ ಮೈಸೂರು ಪ್ರಾಂತ್ಯದ ಸಹಕಾರಿ ಸಂಘಗಳ ಜಂಟಿ ನಿಬಂಧಕ ಡಾ| ಉಮೇಶ್ ಜಿ ಅವರು ಭೇಟಿ ನೀಡಿ ಕಾರಂತರ ಕಂಚಿನ ಪುತ್ಥಳಿ, ನವೀಕರಣಗೊಂಡ ಸಭಾಂಗಣ, ಆರ್ಟ್ ಗ್ಯಾಲರಿ, ಕಿರು ಸಭಾಂಗಣ, ಗ್ರಂಥಾಲಯ, ಕಾರಂತರ ಅಪರೂಪದ ಛಾಯಚಿತ್ರ ವೀಕ್ಷಿಸಿದರು.
ಕಾರಂತರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಬದುಕು-ಬರಹ ವಿಸ್ತೃತ ಲೋಕ. ಇಂತಹ ಮೇರು ವ್ಯಕ್ತಿತ್ವದ ಸಾಧಕನ ಸಾಧನೆಯ ಪುಟಗಳು ಕಾರಂತ ಥೀಮ್ ಮೂಲಕ ಮುಂದಿನ ಪೀಳಿಗೆಗೆ ರವಾನೆಯಾಗುವುದರ ಜೊತೆಗೆ ಜ್ಞಾನೋದಯ ಉಂಟು ಮಾಡುವಲ್ಲಿ ಈ ಥೀಮ್ ಪಾರ್ಕ್ ಕರ್ಯೋನ್ಮುಖವಾಗಲಿ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಶ್ರೀ ಅರುಣ್ ಕುಮಾರ್ ಎಸ್, ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಕೆ. ಕೊರಗ ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಜಗದೀಶ್ ಕೆಮ್ಮಣ್ಣು ಹಾಗೂ ನಿರ್ದೇಶಕರು, ಥೀಮ್ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.