ಕಾರಂತ ಥೀಮ್ ಪಾರ್ಕ್ : ದತ್ತಿ ಪುರಸ್ಕಾರಕ್ಕೆ ಆಯ್ಕೆ
ಕೋಟ : ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ದಿ.ಡಾ.ರಾಘವೇಂದ್ರ ಉರಾಳ ದತ್ತಿ ಪುರಸ್ಕಾರಕ್ಕೆ ಶ್ರೀ ತಾರನಾಥ ಹೊಳ್ಳ ಕಾರ್ಕಡ, ದಿ.ಮನೋಹರ್ ತೋಳಾರ್ ಕ್ರೀಡಾ ಪುರಸ್ಕಾರಕ್ಕೆ ಶ್ರೀ ಸುರೇಶ್ ಪೂಜಾರಿ ಪಾಂಡೇಶ್ವರ, ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಸ್ಮಾರಕ ದತ್ತಿ ಪುರಸ್ಕಾರಕ್ಕೆ ಕುಮಾರಿ ದೀಕ್ಷಾ ಬ್ರಹ್ಮಾವರ, ದಿ.ಉಪೇಂದ್ರ ಐತಾಳ್ ಕೃಷಿ ದತ್ತಿ ಪುರಸ್ಕಾರಕ್ಕೆ ಪ್ರಗತಿಪರ ಕೃಷಿಕ ಶ್ರೀ ಶೀಲರಾಜ್ ಕದ್ರಿಕಟ್ಟು, ಅವರನ್ನು ಆಯ್ಕೆ ಮಾಡಲಾಗಿದ್ದು ಪುರಸ್ಕಾರವನ್ನು ಡಿಸೆಂಬರ್ 24 ರಂದು ಸಂಜೆ 6 ಗಂಟೆಗೆ ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಪ್ರದಾನ ಮಾಡಲಾಗುವುದು, ಸಭಾ ಕಾರ್ಯಕ್ರಮದ ನಂತರ ಶ್ರೀ ದುರ್ಗಾ ಕಲಾ ತಂಡ ಹಾರಾಡಿ ಬ್ರಹ್ಮಾವರದವರಿಂದ ಕುಂದಗನ್ನಡದ ಹಾಸ್ಯಮಯ ನಾಟಕ ಒಂದಲ್ಲಾ ಒಂದ್ ಸಮಸ್ಯೆ ನಾಟಕ ಪ್ರದರ್ಶನವಿದೆ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಕೆ ಸತೀಶ್ ಕುಂದರ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮ, ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.