ಕೋಟ;ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ ಡಾ|| ಶಿವರಾಮ ಕಾರಂತ ಟ್ರಸ್ಟ್(ರಿ) ಉಡುಪಿ ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ನಾದ ಗಾರುಡಿಗ ಪಾಂಡೇಶ್ವರ ಕಾಳಿಂಗ ರಾವ್ ಸ್ಮಾರಕ ಪುರಸ್ಕಾರಕ್ಕೆ ಸಂಗೀತ ಸಂವೇದಕ ಡಾ.ಸತೀಶ್ ಪೂಜಾರಿ ಹಾಗೂ ಮಿದುಳು ಮಿಂಚು ಗಾಯಕ ಶ್ರೀ ಕೃಷ್ಣ ಸಾಸ್ತನ ಅವರಿಗೆ ನೀಡಲಾಯಿತು.
ಸಂಗೀತ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ವಿಶಿಷ್ಠ ಕಾರ್ಯಕ್ರಮ ಸಂಘಟಿಸಿ ಸ್ವತಃ ಗಾಯಕರಾಗಿರುವ ರಾಷ್ಟೀಯ ಪುರಸ್ಕಾರ ಪಡೆದ ರಿಸರ್ವರೇಷನ್ ಚಲನಚಿತ್ರ ಹಿನ್ನಲೆ ಗಾಯಕರಾಗಿ, ಎಸ್ ಜಾನಕಿ ಪುರಸ್ಕಾರ ಆರಂಭಿಸಿ ಅನೇಕ ಸಂಗೀತ ಕಾರ್ಯಕ್ರಮ ಆಯೋಜಿಸಿರುವ ಡಾ.ಸತೀಶ್ ಪೂಜಾರಿ ವೃತ್ತಿಯಲ್ಲಿ ವೈದ್ಯರು ಪ್ರವೃತ್ತಿಯಲ್ಲಿ ಬಹುಮುಖಿ.
ಕರಾವಳಿ ಭಾಗದಲ್ಲಿ ಗೀತಗಾಯನ ಕಾರ್ಯಕ್ರಮ ಹೊಸ ಭ್ಯಾಷ್ಯ ಬರೆದು ಸಂಚಲನ ಮೂಡಿಸಿದ ಹಲವು ಧ್ವನಿ ಸಾಂದ್ರಿಕೆಗಳಿಗೆ ಧ್ವನಿ ನೀಡಿದ ಗಾಯಕರು.
ದಿನಾಂಕ ಮೇ 27ರಂದು ಅಪರಾಹ್ನ 3ಕ್ಕೆ ಈ ಪುರಸ್ಕಾರ ಹಸ್ತಾಂತರಿಸಲಾಯಿತು.