ಕೋಟ : ಸಂಗೀತಕ್ಕೆ ಹೃನ್ಮನಗಳನ್ನು ಹಗುರಗೊಳಿಸುವ ಅದ್ಭುತ ಶಕ್ತಿಯಿದೆ. ಬದುಕಿನ ಜಂಜಡಗಳ ನಡುವೆ ಮನಸು ಅರಳಿಸಲು ಸಂಗೀತ ಅತ್ಯುತ್ತಮ ಸಾಧನವೆಂದು ಸಂಗೀತ ಚಿಂತಕ ಚಂದ್ರಶೇಖರ ಕೆದ್ಲಾಯ ನುಡಿದರು.
ಡಾ|| ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ| ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ರೋಟರಿ ಕ್ಲಬ್ ಹಂಗಾರಕಟ್ಟೆ -ಸಾಸ್ತಾನ, ಕೋಟತಟ್ಟು ಗ್ರಾಮ ಪಂಚಾಯತ್, ಕೋಟತಟ್ಟು ಆಸರೆಯಲ್ಲಿ ನಡೆದ – ಸಾಂಸ್ಕೃತಿಕ ವೈಭವ ತಿಲ್ಲಾನ – 2019 ಕಾರ್ಯಕ್ರಮದಲ್ಲಿ ಅವರು ಗರಿಕೆ ಗಣಪನ ಗಾನಾಮೃತ ಧ್ವನಿ ಸಾಂದ್ರಿಕೆ ಅನಾವರಣ ಮಾಡಿ ಮಾತನಾಡಿದ್ದರು.
ನಲ್ನುಡಿ ಮಾತುಗಳನ್ನಾಡಿದ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ ನಾವುಡ ಧ್ವನಿ ಸಾಂದ್ರಿಕೆಯ ರಚನೆ ಹಾಗೂ ಧ್ವನಿ ಸುರುಳಿಯ ನಿರ್ಮಾಣದ ಬಗ್ಗೆ ಶ್ಲಾಘಿಸಿದರು.
ವೇದಿಕೆಯಲ್ಲಿ ಅಮೃತೇಶ್ವರಿ ದೇವಸ್ಥಾನದ ಧರ್ಮದಶರ್ಿ ಶ್ರೀ ಆನಂದ್ ಸಿ ಕುಂದರ್, ಶ್ರೀ ಕ್ಷೇತ್ರ ಗರಿಕೆಮಠದ ವೇದಮೂರ್ತಿ ಶ್ರೀ ರಾಮಪ್ರಸಾದ ಅಡಿಗರು, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಸಂಗೀತ ನಿದರ್ೇಶಕ ರವಿ ಕಾರಂತ್, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಕಾರ್ಯದರ್ಶಿ ಶ್ರೀಮತಿ ಲೀಲಾವತಿ ಗಂಗಾಧರ್ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಅಧ್ಯಕ್ಷರಾದ ಶ್ರೀಮತಿ ಸುಲತಾ ಹೆಗ್ಡೆ ಸ್ವಾಗತಿಸಿದರೆ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾವಿಸಿ ವಂದಿಸಿದರು. ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.