ಶ್ರೀ ರವಿ ಕಾರಂತ್, ಶ್ರೀ ಆಲ್ವಿನ್ ಅಂದಾದ್ರೆರವರಿಗೆ ದಿ.ಕೋಟ ಮಂಜುನಾಥ ಸ್ಮಾರಕ ಪ್ರಶಸ್ತಿ ಪ್ರದಾನ
ಕೋಟ: ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ದಿ.ಕೋಟ ಮಂಜುನಾಥ ಸ್ಮಾರಕ ಪ್ರಶಸ್ತಿಯನ್ನು ಗಾಯಕ-ಸಂಗೀತ ನಿರ್ದೇಶಕ ರವಿ ಕಾರಂತ್ ಹಾಗೂ ನಟ-ನಿರ್ದೇಶಕ ಆಲ್ವಿನ್ ಅಂದ್ರಾದೆ ಅವರಿಗೆ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ಹಸ್ತಾಂತರಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರವಿ ಕಾರಂತ್ ಪುರಸ್ಕಾರದಿಂದ ಜವಾಬ್ದಾರಿ ಹೆಚ್ಚಾಗಿದ್ದು ,ಅವಕಾಶಗಳ ಸರಿಯಾದ ಸದ್ಭಳಕೆ ಮಾಡಿಕೊಂಡಾಗ ಯಶಸ್ಸು ಸಾಧ್ಯ ಎಂದು ನುಡಿದರು. ಆಲ್ವಿನ್ ಅಂದ್ರಾದೆ ಯವರು, ರಂಗಭೂಮಿ ನಮ್ಮ ಬದುಕಿನ ದಾರಿದೀಪಗಳಾಗಿದ್ದು ಅದರಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಾಗ ಉನ್ನತಿ ಸಾಧ್ಯ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಉದ್ಯಮಿ ಸುಬ್ರಾಯ್ ಆಚಾರ್, ಯಕ್ಷಸೌರಭ ಹಿರೇಮಹಾಲಿಂಗೇಶ್ವರ ಕಲಾರಂಗದ ಹರೀಶ್ ದೇವಾಡಿಗ, ರಾಘವೇಂದ್ರ ಶೆಟ್ಟಿ ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯ ವಾಸು ಪೂಜಾರಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ವಂದಿಸಿದರು. ಟ್ರಸ್ಟಿ ಸತೀಶ್ ವಡ್ಡರ್ಸೆ ನಿರೂಪಿಸಿದರು.