ಕೋಟ : ಡಾ|| ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ಸಾಂಸ್ಕೃತಿಕ – ಕ್ರೀಡಾ ಚಿಂತಕ ದಿವಂಗತ ಮನೋಹರ್ ತೋಳಾರ್ ಸ್ಮಾರಕ ಪುರಸ್ಕಾರಕ್ಕೆ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ ಶ್ರೀ ಗಣೇಶ ಪಾಂಡೇಶ್ವರ ಹಾಗೂ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳ ಸದಾ ಸಂಘಟಿಸುವ ಪ್ರಸಿದ್ಧ ಗಾಯಕರನ್ನು ತನ್ನೂರಿಗೆ ಪರಿಚಯಿಸುವ ಸಾಹಿತ್ಯಕ ಚಿಂತಕ ಶ್ರೀ ರಮೇಶ್ ಎಚ್. ಕುಂದರ್ ಅವರಿಗೆ ನೀಡಲು ಸಮಿತಿ ನಿರ್ಧರಿಸಿದೆ.
ಇದೇ 17 ರಂದು ಸಂಜೆ 5 ಕ್ಕೆ ಕೋಟದ ಕಾರಂತ ಥೀಂ ಪಾರ್ಕ್ ಹಸ್ತಾಂತರಿಸಲಾಗುತ್ತದೆ. ಬಳಿಕ ಓಂ ಫ್ರೆಂಡ್ಸ್ ಕುಂದಾಪುರ ಸಾರಥ್ಯದಲ್ಲಿ ರಾಜ್ಯ ಪ್ರಶಸ್ತಿ ವಿಜೇತೆ ಕುಮಾರಿ ಕಸ್ತೂರಿ ಅಂಧ ಕಲಾವಿದೆ ಮತ್ತು ತಂಡದವರಿಂದ ಬಾಳಿಗೊಂದು ಬಂಗಾರ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಾಧ್ಯಕ್ಷ ಶ್ರೀ ಆನಂದ ಸಿ ಕುಂದರ್, ಅಧ್ಯಕ್ಷ ಶ್ರೀ ರಘು ತಿಂಗಳಾಯ, ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.