ಕಾರಂತ ಥೀಮ್ ಪಾರ್ಕ್ ಗೆ ಜಿಲ್ಲಾ ನ್ಯಾಯಾಧೀಶ ಶ್ರೀ ಪ್ರಕಾಶ್ ಖಂಡೇರಿ ಭೇಟಿ
ಕೋಟ: ಗೌರವಾನ್ವಿತ ಶ್ರೀ ಪ್ರಕಾಶ್ ಖಂಡೇರಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕುಂದಾಪುರ ಇವರು ಕಾರಂತ ಥೀಮ್ ಪಾರ್ಕ್ ಭೇಟಿ ನೀಡಿದರು.ಶಾಲಾ ಜೀವನದಲ್ಲಿ ಕಾರಂತರನ್ನು ನೋಡಿದ್ದು,ಅವರು ಸಮಯಕ್ಕೆ ಕೊಡುತ್ತಿದ್ದ ಮಹತ್ವವನ್ನು ನೆನಪಿಸಿಕೊಂಡು,ಈ ಸ್ಥಳವು ಇನ್ನಷ್ಟೂ ಅಭಿವೃದ್ಧಿ ಹೊಂದಿ ಕಾರಂತರ ಹೆಸರು ಇನ್ನಷ್ಟೂ ಬೆಳಗಳಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಕುಂದಾಪುರ ವಕೀಲ ಸಂಘದ ಅಧ್ಯಕ್ಷ ಸಳ್ವಾಡಿ ನಿರಂಜನ ಹೆಗ್ಡೆ, ಕಾರ್ಯದರ್ಶಿ ಎಚ್ ಪ್ರಮೋದ್ ಹಂದೆ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ವಕೀಲ ಶ್ಯಾಮ್ ಸುಂದರ್ , ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಉಪಸ್ಥಿತರಿದ್ದರು.