ಶ್ರೀ ಗಣೇಶ್ ಪಾಂಡೇಶ್ವರ ಹಾಗೂ ಶ್ರೀ ರಮೇಶ್ ಎಚ್.ಕುಂದರ್, ಇವರಿಗೆ ದಿ.ಮನೋಹರ್ ತೋಳಾರ್ ಸ್ಮಾರಕ ಪುರಸ್ಕಾರ ಪ್ರದಾನ
ಕೋಟ : ಡಾ|| ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ಸಾಂಸ್ಕೃತಿಕ – ಕ್ರೀಡಾ ಚಿಂತಕ ದಿವಂಗತ ಮನೋಹರ್ ತೋಳಾರ್ ಸ್ಮಾರಕ ಪುರಸ್ಕಾರಕ್ಕೆ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ ಶ್ರೀ ಗಣೇಶ ಪಾಂಡೇಶ್ವರ ಹಾಗೂ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳ ಸದಾ ಸಂಘಟಿಸುವ ಪ್ರಸಿದ್ಧ ಗಾಯಕರನ್ನು ತನ್ನೂರಿಗೆ ಪರಿಚಯಿಸುವ ಸಾಹಿತ್ಯಕ ಚಿಂತಕ ಶ್ರೀ ರಮೇಶ್ ಎಚ್. ಕುಂದರ್ ಅವರಿಗೆ ಕಾರಂತ ಥೀಮ್ ಪಾರ್ಕ್ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಶ್ರೀ ಜನಾರ್ಧನ್ ಮರವಂತೆ, ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ , ಡಾ|| ಜಿ ಶಂಕರ್ ಪ್ರಥಮ ದರ್ಜೆ ಸರಕಾರಿ ಕಾಲೇಜು ಉಡುಪಿ ಇದರ ಪ್ರಾಂಶುಪಾಲರಾದ ಶ್ರೀ ಭಾಸ್ಕರ್ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಜಿ.ಪುತ್ರನ್,ಕಿಶೋರ್ ಕುಮಾರ್ ಕುಂದಾಪುರ, ಶ್ರೀಮಾತಾ ಆಸ್ಪತ್ರೆ ಪ್ರವರ್ತಕರಾದ ಪ್ರಕಾಶ್ ತೋಳಾರ್,ರಂಗಕರ್ಮಿ ಶ್ರೀಮತಿ ಪೂರ್ಣಿಮಾಸುರೇಶ್ ನಾಯಕ್, ಉದ್ಯಮಿ ಸುಬ್ರಾಯ್ ಆಚಾರ್ ಮಣೂರು,ಗಾಯಕಿ ಕುಮಾರಿ ಕಸ್ತೂರಿ ಉಪಸ್ಥಿರಿದ್ದರು.
ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿದರೆ, ಹರೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿ,ವಿವೇಕ್ ಅಮೀನ್ ವಂದಿಸಿದರು