ಎಪ್ರಿಲ್ 13 ರಿಂದ 20 ರವರೆಗೆ ಕಾರಂತ ಥೀಮ್ ಪಾರ್ಕ್ ನಲ್ಲಿ ಬೇಸಿಗೆ ಶಿಬಿರ
ವಿಕಸನ-2019
ಕೋಟ: ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ|| ಶಿವರಾಮ ಟ್ರಸ್ಟ್ (ರಿ) ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಗೀತಾನಂದ ಫೌಂಡೇಶನ್ ಮಣೂರು-ಪಡುಕೆರೆ ಇವರ ಆಶ್ರಯದಲ್ಲಿ ಕರಾವಳಿಯ ಕಣ್ಮಣಿ ದಿ.ಕೆ.ಸಿ.ಕುಂದರ್ ಪುಣ್ಯತಿಥಿ ಅಂಗವಾಗಿ ಮಕ್ಕಳ ಉಚಿತ ಬೇಸಿಗೆ ಶಿಬಿರ ವಿಕಸನ-2019 ವನ್ನು ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ಹಮ್ಮಿಕೊಳ್ಳಲಾಗಿದೆ. ಎಪ್ರಿಲ್ 13 ರಿಂದ 20 ತನಕ ಶಿಬಿರ ನಡೆಯಲಿದ್ದು ಕ್ರಾಫ್ಟ್,ಚಿತ್ರಕಲೆ,ರಂಗ ಶಿಬಿರ, ಗುಂಪು ಚಟುವಟಿಕೆ,ವ್ಯಕ್ತಿತ್ವ ವಿಕಸನ,ಏಕಾಗ್ರತೆ ಇನ್ನಿತರ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನಡೆಯಲಿದೆ. ಮೊದಲು ನೊಂದಾಯಿಸಿದ 60 ಮಕ್ಕಳಿಗೆ ಅವಕಾಶವಿದ್ದು ಅರ್ಜಿ ಕಾರಂತ ಥೀಮ್ ಪಾರ್ಕ್ ನಲ್ಲಿ ದೊರೆಯಲಿದ್ದು ಹೆಚ್ಚಿನ ಮಾಹಿತಿಗಾಗಿ ಪ್ರಶಾಂತ್(7829729340) ಮೇಲ್ವಿಚಾರಕರು ಕಾರಂತ ಥೀಮ್ ಪಾರ್ಕ್ ಕೋಟ ಇವರನ್ನು ಸಂಪರ್ಕಿಸಬಹುದೆಂದು ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್ ಅಧ್ಯಕ್ಷರಾದ ಶ್ರೀ ರಘು ತಿಂಗಳಾಯ,ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.