ಕೋಟ: ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದಿಂದ ಗುರಿ ಕಡೆಗೆ ಸಾಗಿದಾಗ ಯಶಸ್ಸು ನಮ್ಮದಾಗುತ್ತದೆ ಅದರಂತೆ ನಮ್ಮ ಜೀವನ ರೂಪಿಸಿಕೊಳ್ಳುವ ಮಾರ್ಗ ನಮ್ಮದಾಗಬೇಕು ಎಂದು ಶಿಕ್ಷಕ-ಕಾರಂತ ಪ್ರತಿಷ್ಠಾನದ ಕೋಶಾಧಿಕಾರಿ ಟ್ರಸ್ಟಿ ಸಂಜೀವ್ ಜಿ ಗುಂಡ್ಮಿ ನುಡಿದರು.ಅವರು ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರ ವಿಕಸನ -2019 ಏಳನೇ ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಕೆ.ಕೆ ಶಿವರಾಮ, ಭರತ್ ಗಾಣಿಗ ಹಾಗೂ ವಿಕಸನ ನಾಲ್ಕು ತಂಡದ ನಾಯಕರು ಉಪಸ್ಥಿತರಿದ್ದರು.ಶಿಬಿರಾರ್ಥಿ ಕಾರ್ತಿಕ್ಸ್ವಾಗತಿಸಿ,ಸುರಾಕ್ಷ ನಿರೂಪಿಸಿದರು.ಶಿಬಿರಾಧಿಕಾರಿ ಕುಮಾರ್ ಪ್ರಸ್ತಾಪಿಸಿದರು. �