ಕಾರಂತ ಥೀಮ್ ಪಾರ್ಕ್ ಅಭಿವೃದ್ಧಿ ಖುಷಿ ಕೊಡುತ್ತಿದೆ-ರವೀಂದ್ರ ಕೋಟ
ಕೋಟ: ಕಡಲತಡಿಯ ಭಾರ್ಗವ ಖ್ಯಾತಿಯ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಸಾಹಿತ್ಯಸಕ್ತರನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದ್ದು, ಇಲ್ಲಿ ನಡೆಯುವ ಕಾರ್ಯಕ್ರಮ ಬಹಳ ಅರ್ಥ ಪೂರ್ಣವಾಗಿದ್ದು ಮಕ್ಕಳ ಉನ್ನತಿಗೆ ಸಹಕರಿಯಾಗಲಿದೆ ಎಂದು ಪತ್ರಕರ್ತ ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧ್ಯಕ್ಷರಾದ ರವೀಂದ್ರ ಕೋಟ ನುಡಿದರು.ಅವರು ಕಾರಂತ ಥೀಮ್ ಪಾರ್ಕ್ ನಡೆಯುತ್ತಿರುವ ವ ಬೇಸಿಗೆ ಶಿಬಿರ ವಿಕಸನ 2019 ಕಾರ್ಯಕ್ರಮದ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವೇದಿಕೆಯಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ, ಹಾಗೂ ವಿಕಸನ ನಾಲ್ಕು ತಂಡದ ನಾಯಕರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಶಿಬಿರಾರ್ಥಿ ಅನುಷ ನಿರೂಪಿಸಿ ಶಿಬಿರಾಧಿಕಾರಿ ಕುಮಾರ್ ಪ್ರಸ್ತಾಪಿಸಿದರು.