ಕಾರಂತ ಥೀಮ್ ಪಾರ್ಕ್ ಗೆ ಜಿಲ್ಲಾ ಮುಖ್ಯ ಕಾರ್ಯ ನಿರ್ವಾಣಾಧಿಕಾರಿ ಸಿಂಧೂ ಬಿ ರೂಪೇಶ್ ಭೇಟಿ
ಕೋಟ:ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಉಡುಪಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸಿಂಧೂ ಬಿ ರೂಪೇಶ್ ಭೇಟಿ ನೀಡಿ ವೀಕ್ಷಿಸಿದರು.ಕಾರಂತರು ಕುಳಿತ ಭಂಗಿಯ ಮೂರ್ತಿ,ಕಂಚಿನ ಪುತ್ಥಳಿ,ರಾಧ ಕೃಷ್ಣ ಮೂರ್ತಿ,ಆರ್ಟ್ ಗ್ಯಾಲರಿ,ರಂಗ ಮಂದಿರ,ಗ್ರಂಥಾಲಯ ವೀಕ್ಷಿಸಿದರು. ಕಾರಂತ ಥೀಮ್ ಪಾರ್ಕ್ ಸುವ್ಯವಸ್ಥಿತವಾಗಿ ನಿರ್ಮಿಸಿದ್ದು ಮನಸ್ಸಿಗೆ ಮುದ ನೀಡುತ್ತದೆ.ಆಗಮಿಸಿದ ಪ್ರವಾಸಿರಿಗೆ ಕಾರಂತರ ಕುರಿತಾದ ವಿಡಿಯೋ ಆಡಿಯೋ ಸಲಕರಣೆಗಳನ್ನು ಬಳಸಿ ಕಾರಂತರ ವ್ಯಕ್ತಿತ್ವವನ್ನು ಇನ್ನೂ ಹೆಚ್ಚಿನ ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ,ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್,ಗ್ರಂಥಾಲಯ ಮೇಲ್ವಿಚಾರಕಿ ಶೈಲಜಾ ಕೆ.ಎನ್.ಸಿಬ್ಬಂದಿ ಪೂಜಾ ಉಪಸ್ಥಿತರಿದ್ದರು