ಕೋಟ ಕಾರಂತ ಥೀಮ್ ಪಾರ್ಕ್ : ಕೆ.ಸಿ ಕುಂದರ್ ಪ್ರಶಸ್ತಿ ಪ್ರದಾನ
ಕೋಟ, ಎ. ೯: ಸಾಂಪ್ರದಾಯಿಕ ಕುಲಕಸಬುಗಾರ ಸೋಮ ಮರಕಾಲ ಹಾಗೂ ಗುಡಿಕೈಗಾರಿಕೆಯಲ್ಲಿ
ಹೆಸರುಗಳಿಸಿದ ನಾಗರಾಜ್ ಆಚಾರ್ಯ ಗುಂಡ್ಮಿಯವರಿಗೆ ಎ. ೨೦ರಂದು ಕೋಟ ಕಾರಂತ
ಕಲಾಭವನದಲ್ಲಿ ಕರಾವಳಿ ಕಣ್ಮಣಿ ದಿ| ಕೆ.ಸಿ ಕುಂದರ್ ಸ್ಮಾರಕ ಪುರಸ್ಕಾರ ನೀಡಿ
ಗೌರವಿಸಲಾಯಿತು.
ಡಾ|ಕೆ.ಶಿವರಾಮ ಕಾರಂತ ಪ್ರತಿಷ್ಠಾನ ಕೋಟ ಹಾಗೂ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು
ಗ್ರಾ.ಪಂ., ಗೀತಾನಂದ ಫೌಂಡೇಶನ್ ಮಣೂರು-ಪಡುಕರೆ, ಜೇಸಿಐ ಕಲ್ಯಾಣಪುರ, ರೋಟರಿ
ಹಂಗಾಕಟ್ಟೆ-ಸಾಸ್ತಾನ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಬಾಲಪ್ರತಿಭೆ ಸಿಂಚನ
ಕೋಟೇಶ್ವರ ಮಾತನಾಡಿ, ಮಕ್ಕಳ ಪ್ರತಿಭೆಗಳಿಗೆ ಹೆತ್ತವರು ಸೂಕ್ತ ಪ್ರೋತ್ಸಾಹವನ್ನು
ನೀಡಬೇಕು. ನನ್ನ ಹೆತ್ತವರು ನನ್ನೊಳಗಿನ ಪ್ರತಿಭೆಯನ್ನು ಗುರುತಿಸಿ
ತರಬೇತುಗೊಳಿಸಿದ್ದರಿಂದ ಇಂದು ಈ ಸ್ಥಾನದಲ್ಲಿದ್ದೇನೆ ಎಂದರು.
ಕಾರ್ಯಕ್ರಮದ ಸಂಯೋಜಕರಾದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್
ಮಾತನಾಡಿ, ಕೆ.ಸಿ. ಕುಂದರ್ ಅವರು ಕರಾವಳಿ ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಭಾಸ್ಯ
ಬರೆದವರು ಹಾಗೂ ಆಧುನಿಕ ಮಾರುಕಟ್ಟೆ ವ್ಯವಸ್ಥೆಯನ್ನು ಪರಿಚಯಿಸಿದವರು. ಅವರ
ದಾರಿಯಲ್ಲೇ ನಾವು ಮುಂದುವರಿಯುತ್ತಿದ್ದೇವೆ ಎಂದರು.
ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಲ್ಯಾಣಪುರ ಜೇಸಿಐ ಅಧ್ಯಕ್ಷೆ ಆಶಾ ಅಲೆನ್ವಾಜ್, ಹಂಗಾರಕಟ್ಟೆ ರೋಟರಿ ಅಧ್ಯಕ್ಷೆ
ಸುಲತಾ ಹೆಗ್ಡೆ ಹಾಗೂ ಕೆ.ಸಿ. ಕುಂದರ್ ಸಂಬಂಽಗಳಾದ ಪ್ರೇಮಾ ರಮೇಶ್, ಮಹೇಶ್ವರೀ
ಸುರೇಶ್, ಸರೋಜ ಕಾರ್ತಿಕ್ ಮತ್ತು ಕೋಟತಟ್ಟು ಗ್ರಾ.ಪಂ. ಪಿಡಿಒ ಸುಜಾತ ಲಕ್ಕಪ್ಪ,
ವಿಧಾನಪರಿಷತ್ ವಿಪಕ್ಷ ನಾಯಕರ ಆಪ್ತಸಹಾಯಕರಾದ ಹರೀಶ್ ಶೆಟ್ಟಿ, ವಿವೇಕ್ ಅಮೀನ್,
ಕಾರಂತ ಟ್ರಸ್ಟ್ನ ಟ್ರಸ್ಟಿ ಸುಬ್ರಾಯ ಆಚಾರ್ಯ, ಶಿಬಿರದ ನಿರ್ದೇಶಕರಾದ ಸತೀಶ್
ವಡ್ಡರ್ಸೆ, ಕುಮಾರ್, ಪ್ರಶಾಂತ್ ಸಾಬ್ರಕಟ್ಟೆ, ರವಿಕಿರಣ್ ಕೋಟ ಉಪಸ್ಥಿತರಿದ್ದರು.
ಕಾರಂತ ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ,
ಶ್ರೀನಿಽ, ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.