ಕಾರಂತ ಥೀಮ್ ಪಾರ್ಕ್ ನಲ್ಲಿ 23 ರಂದು ಸತ್ಯನಾಪುರದ ಸಿರಿ ಏಕವ್ಯಕ್ತಿ ನಾಟಕ ಪ್ರದರ್ಶನ

ಕೋಟ : ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಜೂನ್ 23 ರಂದು ಅಪರಾಹ್ನ 2.30ಕ್ಕೆ ಅಮೋಘ(ರಿ.) ಹಿರಿಯಡ್ಕ ಕಲಾವಿದರಿಂದ ಪೂರ್ಣಿಮಾ ಸುರೇಶ್ ರವರ ಪ್ರಸ್ತುತಿಯಲ್ಲಿ ಸತ್ಯನಾಪುರದ ಸಿರಿ ಏಕವ್ಯಕ್ತಿ ನಾಟಕ ಪ್ರದರ್ಶನಗೊಳ್ಳಲಿದೆ.
ಎನ್.ವಿ.ರಾವ್ ಕಾದಂಬರಿ ಆಧಾರಿತ ಸತ್ಯನಾಪುರದ ಸಿರಿ ಏಕವ್ಯಕ್ತಿ ನಾಟಕದಲ್ಲಿ ಪೂರ್ಣಿಮಾ ಸುರೇಶ್ ಸಿರಿ ಪಾತ್ರ ನಿರ್ವಹಿಸಲಿದ್ದು, ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರು ಅವರ ನಿರ್ದೇಶನ, ಶೋಧನ್ ಎರ್ಮಾಳ್ ಹಿನ್ನಲೆ ಸಂಗೀತ, ಪ್ರದೀಪ್ ಚಂದ್ರ ಕುದ್ಪಾಡಿ ಅವರ ಬೆಳಕು ಸಂಯೋಜನೆವಿದೆ.

