ಕನ್ನಡ ಸಾರಸ್ವತ ಲೋಕಕ್ಕೆ ಕಾರಂತರ ಕೊಡುಗೆ ಅವಿಸ್ಮರಣೀಯ-ಆರ್ ಚಂದ್ರಶೇಖರ್
ಕೋಟ: ಕನ್ನಡ ಸಾರಸ್ವತ ಲೋಕಕ್ಕೆ ಅವಿಸ್ಮರಣೀಯ ಕೊಡುಗೆಯನ್ನು ಶಾಶ್ವತವಾಗಿ ಕಲ್ಪಿಸಿಕೊಟ್ಟ ಕನ್ನಡದ ಹಸಿರು-ಉಸಿರು ಡಾ|| ಶಿವರಾಮ ಕಾರಂತರ ಪರಿಕಲ್ಪನೆ ಅತ್ಯಮೃತವಾಗಿ ಈ ಕಾರಂತ ಥೀಮ್ ಪಾರ್ಕ್ ನಲ್ಲಿಸಂಯೋಜಿಸಿರುವುದು ಆಕರ್ಷಕವಾಗಿದ. ಮುಂದಿನ ದಿನಗಳಲ್ಲಿ ಮತ್ತಷ್ಟು ನೂತನ ನಾವೀಣ್ಯವಾಗಿ ರೂಪುಗೊಂಡು ಅಭಿವೃದ್ಧಿ ಹೊಂದಲಿ ಎಂದು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು.
ಅವರು ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಭೇಟಿ ನೀಡಿ ಆರ್ಟ್ ಗ್ಯಾಲರಿ, ರಂಗಮಂದಿರ, ಕಾರಂತರ ವಿವಿಧ ಶೈಲಿಯ ಮೂರ್ತಿ, ಗ್ರಂಥಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್, ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್, ಗ್ರಂಥಾಲಯ ಮೇಲ್ವಿಚಾರಕಿ ಶೈಲಜಾ ಕೆ.ಎನ್. ಸಹಾಯಕಿ ಪೂಜಾ, ಪ್ರವಾಸಿ ಮಿತ್ರ ಕುಶಲ ಉಪಸ್ಥಿತರಿದ್ದರು.