ಯಕ್ಷಗಾನದ ಅಂತರ್ ಸತ್ವ ತಿಳಿದಾಗ ಬೆಳವಣಿಗೆ ಸಾಧ್ಯ-ಶ್ರೀ ಸುಜಯೀಂದ್ರ ಹಂದೆ
ಕೋಟ:ಯಕ್ಷಗಾನದ ಬಗ್ಗೆ ಆಳವಾದ ಅಭ್ಯಾಸ,ಅದರ ಒಳಗಿನ ಅಂತರ್ ಸತ್ವ ತಿಳಿದಾಗ ನಮ್ಮಿಂದ ಬೆಳವಣಿಗೆ ಸಾಧ್ಯ, ಇಂದಿನ ಕಾಲದಲ್ಲಿ ಯಕ್ಷಗಾನ ಬಡವಾಗುತ್ತಿದೆ, ಕಲಾವಿದರು ಶ್ರೀಮಂತರಾಗುತ್ತಿದ್ದಾರೆ, ಪೂರ್ವಜರು ನಮಗೆ ನೀಡಿದ ಕೊಡುಗೆ ನಾವು ನೆನಪಿಸಿಕೊಳ್ಳಬೇಕೆಂದು ಯಕ್ಷ ಕಲಾವಿದ-ಮಕ್ಕಳ ಮೇಳದ ಸಂಚಾಲಕ ಶ್ರೀ ಸುಜಯೀಂದ್ರ ಹಂದೆ ಹೇಳಿದರು.
ಅವರು ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ,ಕೋಟತಟ್ಟು ಗ್ರಾಮ ಪಂಚಾಯತ್,ಕಾರಂತ ಟ್ರಸ್ಟ್ (ರಿ.) ಉಡುಪಿ ಇವರು ಕೊಡಮಾಡುವ ದಿ. ಕೋಟ ವೈಕುಂಠ ಯಕ್ಷ ಸೌರಭ ಪುರಸ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು.
ಉಡುಪಿ ಜಿಲ್ಲಾ ಕನ್ನಡ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಅರ್ಹ ವ್ಯಕ್ತಿಯನ್ನು ಪುರಸ್ಕಾರಕ್ಕೆ ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು ಇನ್ನಷ್ಟು ಯಕ್ಷಗಾನದಲ್ಲಿ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ,ಸಾಂಸ್ಕೃತಿಕ ಚಿಂತಕ ಶ್ರೀಧರ್ ಹಂದೆ, ಬ್ರಹ್ಮಾವರ ಶಿಶು ಅಭಿವೃದ್ಧಿ ಪ್ರಭಾರ ಯೋಜನಾಧಿಕಾರಿ ಶ್ರೀಮತಿ ಶೋಭಾ ಶೆಟ್ಟಿ,ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್, ಡಾ|| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರದ ತರಬೇತುದಾರರಾದ ಕುಮಾರಿ ಅಮೃತ ಉಪಾಧ್ಯ ,ಗಿರೀಶ್ ವಕ್ವಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.