ಕಾರಂತ ಥೀಮ್ ಪಾರ್ಕ್ ಗೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಭೇಟಿ
ಕೋಟ:ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಕನ್ನಡ ಪುಸ್ತಕ ಪ್ರಾಧಿಕಾರದ ರಾಜ್ಯ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಭೇಟಿ ನೀಡಿ ವೀಕ್ಷಿಸಿದರು.ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗ್ರಂಥಾಲಯ,ರಂಗಮಂದಿರ ಆರ್ಟ್ ಗ್ಯಾಲರಿ ವೀಕ್ಷಿಸಿದರು.ಕಾರಂತರು ಶಾಶ್ವತವಾಗಿ ನಮ್ಮೊಡನೆ ಇರಲು ಈ ಥೀಮ್ ಪಾರ್ಕ್ ಸಹಕಾರಿ,ಮುಂದಿನ ಯುವ ಪೀಳಿಗೆಗೆ ಕಾರಂತರ ಸಾಧನೆ ಅವರ ಜೀವನ ಪರಿಚಯ ಮಾಡಿಸಲು ಇದು ಒಂದು ವೇದಿಕೆ,ಕಾರಂತರ ಪುಸ್ತಕ ಕೊಂಡುಕೊಳ್ಳಲು ಅನುಕೂಲವಾಗುವಂತೆ ಪ್ರಾಧಿಕಾರದಿಂದ ಪುಸ್ತಕ ಮಳಿಗೆ ಸ್ಥಾಪಿಸಲಾಗುವುದೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ,ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್,ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್,ಗ್ರಂಥಾಲಯ ಮೇಲ್ವಿಚಾರಕಿ ಶೈಲಜಾ.ಕೆ.ಎನ್.ಸಹಾಯಕಿ ಪೂಜಾ ಉಪಸ್ಥಿತರಿದ್ದರು.