ಶ್ರೀಕೃಷ್ಣ ಮರಕಾಲ ಮತ್ತು ಶ್ರೀಮತಿ ರೇವತಿ ತೆಕ್ಕಟ್ಟೆಯವರಿಗೆ ದಿ. ಉಪೇಂದ್ರ ಐತಾಳ್
“ಕೃಷಿ ಪರಿಶ್ರಮ” ಪುರಸ್ಕಾರ
ಕೋಟ : ಕಾರಂತ ಟ್ರಸ್ಟ್ (ರಿ.) ಉಡುಪಿ, ಡಾ. ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡ ಮಾಡುವ ತಿಂಗಳ ಪುರಸ್ಕಾರ, ಪುರೋಹಿತರಾಗಿ ಕೃಷಿ ಚಟುವಟಿಕೆಗೆ ಅನನ್ಯ ಕೊಡುಗೆ ನೀಡಿದ ದಿ. ಉಪೇಂದ್ರ ಐತಾಳ್ ಸ್ಮಾರಕ ಕೃಷಿ ಪರಿಶ್ರಮ ಪುರಸ್ಕಾರವನ್ನು ಮೀನುಗಾರಿಕೆಯೊಂದಿಗೆ ಕೃಷಿ ಮಾಡುತ್ತಿರುವ ಪ್ರಗತಿ ಪರ ಕೃಷಿಕ ಶ್ರೀ ಕೃಷ್ಣ ಮರಕಾಲ ಪಾರಂಪಳ್ಳಿ, ಕೃಷಿಯೊಂದಿಗೆ ಸ್ವಚ್ಚತ ಅಭಿಯಾನದಲ್ಲಿ ತನ್ನನ್ನು ತೊಡಗಿಸಿಕೊಂಡ ಬಹುಮುಖಿ ರೇವತಿ ತೆಕ್ಕಟ್ಟೆಯವರಿಗೆ ನೀಡಲಾಗುವುದೆಂದು ಆಯ್ಕೆ ಸಮಿತಿ ಆಯ್ಕೆ ಮಾಡಲಾಗಿದೆ.
ದಿನಾಂಕ 3-8-2019ರಂದು ಬೆಳಿಗ್ಗೆ 10ಕ್ಕೆ ಕೋಟದ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುವ ದೇಶ ಭಕ್ತಿ ಗೀತೆ ಗಾಯನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಾರ್ಯಾಧ್ಯಕ್ಷ ಶ್ರೀ ಆನಂದ ಸಿ ಕುಂದರ್, ಅಧ್ಯಕ್ಷ ಶ್ರೀ ರಘು ತಿಂಗಳಾಯ, ಪ್ರದಾನ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.