ಕಾರಂತ ಥೀಮ್ ಪಾರ್ಕ್ ನಲ್ಲಿ ಆಗಸ್ಟ್ 1 ರಂದು ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆ-2019
ಜೇಸಿಐ ಕೋಟ ಬ್ರಿಗೇಡಿಯರ್ ಯಜಮಾನ್ಕಿಯಲ್ಲಿ ಗಿಳಿಯಾರು ಯುವಕ ಮಂಡಲ(ರಿ)ಗಿಳಿಯಾರು,ಪಂಚವರ್ಣ ಯುವಕ ಮಂಡಕ(ರಿ.)ಕೋಟ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಹಯೋಗದೊಂದಿಗೆ ಕಲಾ ಚಿಗುರು ಕಲಾತಂಡ ಹಳ್ಳಾಡಿ,ದ.ಸಂ.ಸ.ಹೋಬಳಿಶಾಖೆ (ರಿ)ಕೋಟ,ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ,ಡಾ|| ಕಾರಂತ ಪ್ರತಿಷ್ಠಾನ(ರಿ.)ಕೋಟ,ಕೋಟತಟ್ಟು ಗ್ರಾಮ ಪಂಚಾಯತ್,ರೋಟರಿ ಕ್ಲಬ್ ಹಂಗಾರಕಟ್ಟೆ, ರೈತ ಧ್ವನಿ ಸಂಘ ಕೋಟ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ -2019 ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ಆಗಸ್ಟ 1 ರಂದು ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೀತಾನಂದ ಫೌಂಡೇಶನ್ ನ ಪ್ರವರ್ತಕರಾದ ಆನಂದ ಸಿ ಕುಂದಾರ್ ವಹಿಸಿಕೊಳ್ಳಲಿದ್ದು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ,ಎ.ಎಸ್.ಎನ್.ಹೆಬ್ಬಾರ್,ಜಯರಾಮ ಶೆಟ್ಟಿ,ರಘು ಪಾಂಡೇಶ್ವರ್,ಉತ್ತಮ್ ಸಾರಂಗ ಕುಂದಾಪ್ರ ಅವರಿಂದ ಕುಂದಾಪ್ರ ಕನ್ನಡದ ಬಗ್ಗೆ ವಿಶೇಷ ಉಪನ್ಯಾಸವಿದೆ.ಸಭಾ ಕಾರ್ಯಕ್ರಮದ ನಂತರ ಮಹಿಳಾ ವಿಪ್ರ ಬಳಗ ಸಾಲಿಗ್ರಾಮದವರಿಂದ ಭತ್ತ ತೊಳವು ಹಾಡ್ ಹಾಗೂ ಕಲಾ ಚಿಗುರು ಕಲಾತಂಡ ಹಳ್ಳಾಡಿ ಮುಕ್ತ ವಾಹಿನಿಯ ಹ್ವಾಯ್ ಹ್ಯಾಂಗಿದ್ರಿ ಮರ್ರೆ ಖ್ಯಾತಿಯ ಚೇತನ್ ನೈಲ್ಯಾಡಿ ತಂಡದವರಿಂದ ಕುಂದ ಕನ್ನಡದ ಹಾಸ್ಯ ನ್ಯೆಗಿ ನಾಟ್ಕ ಕಾರ್ಯಕ್ರಮ ನಡೆಯಲಿದೆ.