ವಿಶ್ವ ಸಂಸ್ಕೃತಿಯಲ್ಲಿ ಭಾರತೀಯ ಸಂಸ್ಕೃತಿಗೆ ವಿಶೇಷ ಮಹತ್ವವಿದೆ-ಪ್ರಕಾಶ್ ಭಟ್
ಕೋಟ:ನಮ್ಮ ದೇಶದ ಸಂಸ್ಕೃತಿ-ನಾಡು ನುಡಿಯಲ್ಲಿ ವೈಶಿಷ್ಟ್ಯವಿದ್ದು ವಿದೇಶದವರು ಕೂಡಾ ನಮ್ಮ ಈ ಸೊಗಡಿಗೆ ಮಾರು ಹೋಗುತ್ತಿದ್ದಾರೆ. ಇಂತಹ ಶ್ರೇಷ್ಠ ಪುಣ್ಯ ಭೂಮಿಯಲ್ಲಿ ಹುಟ್ಟಿದ ನಾವು ಧನ್ಯರು,ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಜೀವಿಗೂ ದೇಶದ ಋಣ ತೀರಿಸುವ ಹೊಣೆಯಿದೆ ಇದನ್ನರಿತು ನಮ್ಮಲ್ಲಾದ ಸೇವೆ ನಮ್ಮ ಈ ದೇಶಕ್ಕೆ ನೀಡಬೇಕೆಂದು ಕಾರಂತ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಪ್ರಜ್ಞಾ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಶ್ರೀ ಪ್ರಕಾಶ್ ಭಟ್ ತಿಳಿಸಿದರು.
ಅವರು ಡಾ|| ಕಾರಂತ ಪ್ರತಿಷ್ಠಾನ(ರಿ)ಕೋಟ,ಡಾ|| ಕಾರಂತ ಟ್ರಸ್ಟ್(ರಿ)ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್ ಸಹಯೋಗದಲ್ಲಿ ನಡೆದ ಸಮೂಹ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ,ಉಪಾಧ್ಯಕ್ಷ ಲೋಕೇಶ್ ಶೆಟ್ಟಿ,ವಿವೇಕ ಬಾಲಕಿಯರ ಫ್ರೌಡ ಶಾಲೆ ಮುಖ್ಯೋಪಾಧ್ಯಯ ಜಗದೀಶ ಹೊಳ್ಳ,ಚೇತನಾ ಫ್ರೌಡಶಾಲೆ ಹಂಗಾರಕಟ್ಟೆಯ ಮುಖ್ಯೋಪಾಧ್ಯಯ ಗಣೇಶ್,ಪ್ರಗತಿಪರ ಕೃಷಿಕ ರವೀಂದ್ರ ಐತಾಳ್, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ,ಕೃಷಿಕರಾದ ಕೃಷ್ಣ ಮರಕಾಲ ಹಾಗೂ ರೇವತಿ ತೆಕ್ಕಟ್ಟೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವೆಂಕಟೇಶ್ ಭಟ್ ಸ್ವಾಗತಿಸಿದರು,ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ