ಸಿಬ್ಲು ಕುಂದಾಪ್ರ ಕನ್ನಡ ವೃತ್ತಾಂತ ವಿವಿಧ ಸ್ಪರ್ಧೆಗೆ ಆಹ್ವಾನ
ಕೋಟ: ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ,ಗೀತಾನಂದ ಫೌಂಡೇಶನ್ ಮಣೂರು-ಪಡುಕೆರೆ,ನೆನಪು ಮೂವೀಸ್ ಕೋಟ,ಕೋಟತಟ್ಟು ಗ್ರಾಮ ಪಂಚಾಯತ್, ಸಹಯೋಗದಲ್ಲಿ ಯು-ಚಾನೆಲ್ ಉಡುಪಿ ಸಾದರ ಪಡಿಸುವ ಕುಂದಾಪ್ರ ಕನ್ನಡದ -ವಿವಿಧ ಸ್ಪರ್ಧೆಗಳು ಸಿಬ್ಲು(ಕುಂದಾಪ್ರ ವೃತ್ತಾಂತ) ಕಾರ್ಯಕ್ರಮದಲ್ಲಿ ವಿವಿಧ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸ್ಪರ್ಧೆಯ ವಿವರ
- ಮಾತಾಡಿ-(ಯಾವುದಾದರೂ ನಿಮಗಿಷ್ಟವಾದ ವಿಷಯ- 3 ನಿಮಿಷ) ಕಳ್ಸಿ-9448824559
- ಗಾದೆ ಹೇಳುವಿಕೆ-(2 ನಿಮಿಷ) ಕಳ್ಸಿ-9480722636
- ಕಥೆ ಹೇಳುವಿಕೆ-(3 ನಿಮಿಷ) ಕಳ್ಸಿ-7829729340
- ನಗೆ ಹನಿ ಟಿಕ್ ಟಾಕ್( 2 ನಿಮಿಷ)ಕಳ್ಸಿ-9886292216
- ಜನಪದ ಗೀತೆ ಗಾಯನ(3 ನಿಮಿಷ)ಕಳ್ಸಿ-9731970484
ನಿಯಮಗಳು
1 ರಿಂದ 9 ನೇ ತರಗತಿಗಳ ಒಳಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು
ಒಬ್ಬರು ಯಾವುದಾದರು ಎರಡು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸುವುದು
ಸಂಬಂಧ ಪಟ್ಟ ವಾಟ್ಸಪ್ ನಂಬರಿಗೆ ವಿಡಿಯೋ ಕಳುಹಿಸಬೇಕು.
ವೀಡಿಯೋ ಆರಂಭದಲ್ಲಿ ತಮ್ಮ ಪರಿಚಯ, ಶಾಲೆ ವಿವರವನ್ನು ಕಡ್ಡಾಯವಾಗಿ ತಿಳಿಸುವುದು,ಮೊಬೈಲ್ ಅಡ್ಡವಾಗಿ ಹಿಡಿದುಕೊಂಡು ಚಿತ್ರೀಕರಣ ಮಾಡಬೇಕು,ಪ್ರಸ್ತುತಿಗೆ ತಕ್ಕಂತೆ ವೇಷಭೂಷಣ ಬಳಸಬಹುದು,ಎಲ್ಲಾ ವಿಡಿಯೋವನ್ನು ಯು-ಚಾನೆಲ್ ನಲ್ಲಿ ಮತ್ತು ಯುಟ್ಯೂಬ್ ನಲ್ಲಿ ಪ್ರಸಾರ ಮಾಡಲಾಗುವುದು,ಅತ್ಯುತ್ತಮಗಳಿಗೆ ಪುರಸ್ಕಾರ/ಪ್ರಮಾಣ ಪತ್ರ ನೀಡಲಾಗುವುದು,ವಿಡಿಯೋ ಗಳನ್ನು ಜೂನ್ 20 ಒಳಗಡೆ ಕಳುಹಿಸಬೇಕು.ಮಾಹಿತಿಗಾಗಿ ಪ್ರಶಾಂತ್,ಮೇಲ್ವಿಚಾರಕರು ಕಾರಂತ ಥೀಮ್ ಪಾರ್ಕ್ ಕೋಟ(7829729340) ರನ್ನು ಸಂಪರ್ಕಿಸಿ.

