ಪುಸ್ತಕ ಓದುವ ಹವ್ಯಾಸದಿಂದ ಜ್ಞಾನ ವೃದ್ಧಿ : ಸುಬ್ರಾಯ್ ಆಚಾರ್ಯ
ಕೋಟ : ಪುಸ್ತಕದಿಂದ ನಮ್ಮ ಜ್ಞಾನ ವೃದ್ಧಿಗೊಳ್ಳಲು ಸಹಕಾರಿ, ಪುಸ್ತಕ ಓದುವ ಹವ್ಯಾಸದಿಂದ ನಮ್ಮ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸಲು ದಾರಿ ದೀಪವಾಗುತ್ತದೆ ಎಂದು ಕಾರಂತ ಪ್ರತಿಷ್ಠಾನದ ಟ್ರಸ್ಟಿ ಶ್ರೀ ಸುಬ್ರಾಯ ಆಚಾರ್ಯ ನುಡಿದರು. ಅವರು ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಕಾರಂತ ಥೀಮ್ ಪಾರ್ಕ್ ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯದ ವತಿಯಿಂದ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಮಾತನಾಡಿ ಗ್ರಂಥಾಲಯ ಚಳುವಳಿ ಪಿತಾಮಹ ಡಾ.ಎಸ್ ಆರ್ ರಂಗನಾಥನ್ ಅವರ ಹುಟ್ಟಿದ ದಿನವನ್ನು ಗ್ರಂಥಪಾಲಕರ ದಿನವನ್ನಾಗಿ ಆಚರಿಸುವುದು ಒಂದು ಒಳ್ಳೆಯ ಬೆಳವಣಿಗೆ, ಗ್ರಂಥಾಲಯಕ್ಕೆ ಅವರ ಕೊಡುಗೆ ಅನನ್ಯ ಎಂದರು.
ಗ್ರಂಥಾಲಯದ ಮೇಲ್ವಿಚಾರಕಿ ಶೈಲಜಾ ಕೆ.ಎನ್ ಅವರು ನಮ್ಮ ಗ್ರಂಥಾಲಯದಲ್ಲಿ ಒಟ್ಟು 12,550 ಪುಸ್ತಕಗಳಿದ್ದು ಸ್ಪರ್ಧಾತ್ಮಕ ಪುಸ್ತಕಗಳ ಜೊತೆಗೆ ಕಾದಂಬರಿ, ಮಕ್ಕಳ ಪುಸ್ತಕಗಳಿವೆ,ಅಲ್ಲದೆ ವಿದ್ಯಾರ್ಥಿಗಳಿಗಾಗಿ ಈ-ಲೈಬ್ರರಿ ವ್ಯವಸ್ಥೆಯಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೈಲಾ ಎಸ್ ಪೂಜಾರಿ, ಟ್ರಸ್ಟಿ ರಾಜಶೇಖರ್, ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಉಪಸ್ಥಿತರಿದ್ದರು.


