ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕ ಅನಾವರಣ

ಕೋಟ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ವತಿಯಿಂದ ನವೆಂಬರ್ 29 ರಂದು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಬೆಳಿಗ್ಗೆ 10 ಗಂಟೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಯತೆಯನ್ನು ಕ.ಸಾ.ಪ ಜಿಲ್ಲಾಧ್ಯಕ್ಷ ಶ್ರೀ ನೀಲಾವರ ಸುರೇಂದ್ರ ಅಡಿಗ ವಹಿಸಲಿದ್ದು, ಹಿರಿಯ ವಕೀಲರಾದ ಶ್ರೀ ಎ.ಎಸ್.ಎನ್ ಹೆಬ್ಬಾರ್ ಅವರು ಸಾಹಿತ್ಯ ಸುಧೆ ಪ್ರಕಾಶನದವರು ಪ್ರಕಟಿಸಿದ ಶ್ರೀ ಮುಷ್ತಾಕ್ ಹೆನ್ನಾಬೈಲ್ ಅವರ ಪ್ರಥಮ ಕೃತಿ ಪರಿಭ್ರಮಣ ಅನಾವರಣಗೊಳಿಸಲಿದ್ದು, ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಮಂಗಳೂರು ವಿ.ವಿ ನಿರ್ದೇಶಕ ಶ್ರೀ ಮುದ್ದು ಮೂಡುಬೆಳ್ಳೆ, ಅವರು ಮಲೆನಾಡು ಪ್ರಕಾಶನದವರು ಪ್ರಕಟಿಸಿದ ಶ್ರೀನಾರಾಯಣ ಶೇವಿರೆ ಅವರ ದೇಶೀ ದಿಶೆ ಅನಾವರಣಗೊಳಿಸಿ ಮಾತನಾಡಲಿದ್ದು, ಶ್ರೀ ಪ್ರಸಾದ್ ನಾರ್ಣಕಜೆ , ಇತಿಹಾಸ ಅಧ್ಯಾಪಕರು ಅವರು ಮಲೆನಾಡು ಪ್ರಕಾಶನದವರು ಪ್ರಕಟಿಸಿದ ಶ್ರೀ ನಾರಾಯಣ ಶೇವಿರೆ ಅವರ ಉಪಾಸನೆ ಅನಾವರಣಗೊಳಿಸಿ ಮಾತನಾಡಲಿದ್ದಾರೆ. ಶ್ರೀಮತಿ ಕ್ಯಾಥರೀನ್ ರೋಡ್ರಿಗಸ್, ಶಿಕ್ಷಣ ಚಿಂತಕರು ಅವರು ಸಾಹಿತ್ಯ ಸುಧೆ ಪ್ರಕಾಶನದವರು ಪ್ರಕಟಿಸಿದ ಪ್ರೊ.ನರಹರಿ ಎ.ಎಮ್. ಅವರ ಪ್ರಥಮ ಕೃತಿ ಶಿಕ್ಷಣ ಮನ್ವಂತರ-ರಾಷ್ಟ್ರೀಯ ಶಿಕ್ಷಣ ನೀತಿ -2020 ಅನಾವರಣಗೊಳಿಸಿ ಮಾತಾನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಜಿ.ಜಗದೀಶ್ ಶೆಟ್ಟಿ, ಚಿಂತಕರು ,ಕುಂದಾಪುರ, ಗೌರವ ಉಪಸ್ಥಿತಿಯಲ್ಲಿ ಶ್ರೀ ಅರವಿಂದ ಚೊಕ್ಕಾಡಿ, ಸಾಹಿತಿಗಳು-ಚಿಂತಕರು ಭಾಗವಹಿಸಲಿದ್ದು, ನಿರೂಪಣೆಯನ್ನು ಶ್ರೀ ಲಕ್ಷ್ಮೀ ಮಚ್ಚಿನ, ಪತ್ರಕರ್ತರು ಅವರು ನಡೆಸಿಕೊಡಲಿದ್ದಾರೆ ಎಂದು ಕ.ಸಾ.ಪಗೌರವ ಕಾರ್ಯದರ್ಶಿಗಳಾದ ಶ್ರೀ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ ಗೌರವ ಕೋಶಾದ್ಯಕ್ಷ ವಲೇರಿಯನ್ ಮೆನೇಜಸ್, ಸಂಘಟನಾ ಕಾರ್ಯದರ್ಶಿ ಶ್ರೀ ಆರೂರು ತಿಮ್ಮಪ್ಪ ಶೆಟ್ಟಿ, ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

