ಕಾರಂತ ಥೀಮ್ ಪಾರ್ಕ್ : ವಿವಿಧ ಸಾಧಕರಿಗೆ ದತ್ತಿ ಪುರಸ್ಕಾರ
ಕೋಟ : ಡಾ|| ಕಾರಂತ ಪ್ರತಿಷ್ಠಾನ (ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ ಇವರು ಕೊಡಮಾಡುವ ತಿಂಗಳ ದತ್ತಿ ಪುರಸ್ಕಾರಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಶ್ರೀ ರವಿ ಎಸ್ ಬೈಕಾಡಿ( ಮಂಜುನಾಥ ಕೋಟ ರಂಗಭೂಮಿ ಪುರಸ್ಕಾರ)

ಶ್ರೀ ಶಿವನಾರಾಯಣ ಐತಾಳ್ ( ಮನೋಹರ್ ತೋಳಾರ್ ಕ್ರೀಡಾ ಪುರಸ್ಕಾರ)

ಶ್ರೀ ಶಿವರಾಮ ಕೊಠಾರಿ( ಕೆ.ಸಿ ಕುಂದರ್ ಉದ್ಯಮಿ ಪುರಸ್ಕಾರ)

ಶ್ರೀ ಅವಿನಾಶ್ ಕಾಮತ್( ರಾಘವೇಂದ್ರ ಉರಾಳ ಸಾಂಸ್ಕೃತಿಕ ಪುರಸ್ಕಾರ)

ಶ್ರೀ ಸ್ವರಾಜ್ಯ ಲಕ್ಷ್ಮಿ( ಸುರೇಂದ್ರ ಶೆಟ್ಟಿ ಕುಂದಗನ್ನಡ ಪುರಸ್ಕಾರ)

ಶ್ರೀ ಶಂಭು ಭಟ್( ಪಿ ಕಾಳಿಂಗರಾವ್ ಸಂಗೀತ ಪುರಸ್ಕಾರ)

ಶ್ರೀ ಪಿ.ವಿ ಆನಂದ್( ಕೋಟ ವೈಕುಂಠ ಪುರಸ್ಕಾರ)

ಶ್ರೀ ನಾಗರಾಜ್ ಪುತ್ರನ್ ( ಆನಂದ್ ಶೆಟ್ಟಿ ಸಮಾಜ ಸೇವಾ ಪುರಸ್ಕಾರ)

ಶ್ರೀ ಜಗದೀಶ್ ಉಪಾಧ್ಯ( ಉಪೇಂದ್ರ ಐತಾಳ್ ಕೃಷಿ ಪುರಸ್ಕಾರ)

ಆಯ್ಕೆಯಾಗಿರುತ್ತಾರೆ. ಪುರಸ್ಕೃತರಿಗೆ ಮಾರ್ಚ್ ಇಪ್ಪತ್ತೊಂದರ ಸಂಜೆ
ನಾಲ್ಕು ಗಂಟೆಗೆ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ ಸಿ ಕುಂದರ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್ ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

