ಕಾರಂತ ಥೀಮ್ ಪಾರ್ಕ್: ಜಿಲ್ಲಾ ಮಟ್ಟದ ಮೆಹಂದಿ ಸ್ಪರ್ಧೆಗೆ ಆಹ್ವಾನ

ಕೋಟ : ಕರ್ನಾಟಕ ಸರಕಾರದ ಕರ್ನಾಟಕ ಬ್ಯಾರಿ ಅಕಾಡೆಮಿ ಇವರ ಸಾರಥ್ಯದಲ್ಲಿ ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ ಇವರ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಮಾರ್ಚ್ 20 ರಂದು ಅಪರಾಹ್ನ 2 ಗಂಟೆಗೆ ಸರಿಯಾಗಿ ಉಡುಪಿ ಜಿಲ್ಲಾ ಮಟ್ಟದ ಮೆಹಂದಿ ಸ್ಪರ್ಧೆ ನಡೆಯಲಿದ್ದು ಭಾರತೀಯ ಹಾಗೂ ಅರೇಬಿಕ್ ಎರಡು ವಿಭಾಗದಲ್ಲಿ ನಡೆಯಲಿದೆ. ಸ್ಪರ್ಧಾಳುಗಳಿಗೆ ಒಂದು ಗಂಟೆ ಸಮಯಾವಕಾಶವಿದ್ದು ಪ್ರಥಮ 3,000 ದ್ವಿತೀಯಾ 2,000 ತೃತೀಯಾ 1000 ಹಾಗೂ ನಾಲ್ಕು ಮಂದಿಗೆ ಸಮಾಧಾನಕರ ಮಂದಿಗೆ ರೂ 250 ರಂತೆ ಬಹುಮಾನ ನೀಡಲಾಗುವುದು ಮತ್ತು ಸಂಗೀತ ಕುರ್ಚಿ ಸ್ಪರ್ಧೆ ವಿಜೇತರಿಗೆ ರೂ 1000 ಹಾಗೂ 500 ನೀಡಲಾಗುವುದು. ನೊಂದಾವಣಿಗೆ 7829729340, 7483946578 ಕೊನೆಯ ದಿನಾಂಕ ಮಾರ್ಚ್ 19 ಆಗಿದ್ದು ಆಸಕ್ತರು ಭಾಗವಹಿಸಬಹುದೆಂದು ಅಕಾಡೆಮಿಯ ಅಧ್ಯಕ್ಷ ಶ್ರೀ ರಹೀಂ ಉಚ್ಚಿಲ, ರಿಜಿಸ್ಟ್ರಾರ್ ಪೂರ್ಣಿಮಾ , ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
