ಕಾರಂತರಿಗೆ ಕಾರಂತರೇ ಸಾಟಿ – ಶ್ರೀ ಸೂರ್ಯಕಾಂತ್ ಬಿರಾದಾರ್
ಕೋಟ : ಕಾರಂತರಿಗೆ ಕಾರಂತರೇ ಸಾಟಿ. ಅವರ ನೇರ ನುಡಿ, ವ್ಯಕ್ತಿತ್ವ, ಸಾಹಿತ್ಯ ಕೃಷಿ, ಪ್ರೇರಣದಾಯಕ, ಕಾರಂತರ ನುಡಿಮುತ್ತುಗಳು ಪ್ರಸ್ತುತ ಸಮಾಜಕ್ಕೆ ಕಿವಿಮಾತಾಗಿದ್ದು, ಅವರು ಕಾದಂಬರಿಗಳಲ್ಲಿ ತೋರಿಸುತ್ತಿದ್ದ ಪರಿಸರ ಪ್ರೇಮ ಅಮೋಘವಾದ್ದು, ಪರಿಸರ ಉಳಿಸಿ ಬೆಳೆಸೋದು ಪ್ರತಿಯೊಬ್ಬರ ಕರ್ತವ್ಯ ಎಂದು ಉಡುಪಿ ಜಿಲ್ಲಾ ಕೃಷಿ ಇಲಾಖೆ ಉಪ ನಿದರ್ೇಶಕ ಶ್ರೀ ಸೂರ್ಯಕಾಂತ್ ಬಿರಾದಾರ್ ಅವರು ಹೇಳಿದರು.
ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಭೇಟಿ ನೀಡಿ ಕಾರಂತರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಂಗಮಂದಿರ, ಆರ್ಟ್ ಗ್ಯಾಲರಿ, ಮಿನಿ ಸಂಭಾಗಣ, ಅಂಗನವಾಡಿ, ಗ್ರಂಥಾಲಯ, ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿಪೂರ್ಣಿಮಾ , ಕೋಟ ಕೃಷಿ ಅಧಿಕಾರಿ ಕುಮಾರಿ ಸುಪ್ರಭ, ಬ್ರಹ್ಮಾವರ ಕೃಷಿ ಇಲಾಖೆಯ ಸಿಬ್ಬಂದಿ ಕುಮಾರಿ ದೀಪಾಂಜಲಿ, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.