ಭಾಷೆ ಬೆಳವಣಿಗೆಗೆ ಹೊಸ ಸಾಧ್ಯತೆಗಳ ಪ್ರಯೋಗ ಅತ್ಯಗತ್ಯ-ಶ್ರೀ ರಾಮಚಂದ್ರ ಐತಾಳ್ ಗುಂಡ್ಮಿ
ಕೋಟ : ಭಾಷೆಗಳ ಬೆಳವಣಿಗೆಗೆ ಹೊಸ ಸಾಧ್ಯತೆಗಳ ಪ್ರಯೋಗ ಅತ್ಯಗತ್ಯ, ಭಾಷೆಯ ಬಗ್ಗೆ ಕೀಳರಿಮೆ ತೋರದೆ ಅವಕಾಶವಿದ್ದಾಗ ಸಮರ್ಪಕವಾಗಿ ನಮ್ಮ ಭಾಷೆ ಬಳಸಿದಾಗ ಉನ್ನತೀಕರಣ ಸಾಧ್ಯ. ಕುಂದಾಪ್ರ ಭಾಷೆಗೆ ತನ್ನದೇ ಆದ ಹಿರಿಮೆವಿದೆ. ಗಮ್ಜಾಲ್ ತಂಡದವರ ಹರಟೆ ಸರಣಿ ಕಾರ್ಯಕ್ರಮ ಕುಂದಾಪ್ರ ಭಾಷೆಯ ಸೊಗಡನ್ನು ಮೂಲೆ ಮೂಲೆಗೂ ಪಸರಿಸಲು ಒಂದು ಉತ್ತಮ ಪ್ರಯತ್ನ, ಇವರ ಕಾರ್ಯ ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ತಾಲೂಕು ಅಧ್ಯಕ್ಷ ಶ್ರೀ ರಾಮಚಂದ್ರ ಐತಾಳ್ ಅವರು ಹೇಳಿದರು.
ಅವರು ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಡಾ|| ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಯು ಚಾನೆಲ್ ಸಹಯೋಗದಲ್ಲಿ ಕುಂದಾಪ್ರ ಭಾಷೆಯ ಹರಿವಿಗಾಗಿ ಸರಣಿ ಕಾರ್ಯಕ್ರಮ ಹರಟೆ ಗಮ್ಜಾಲ್-೨೦೨೨(ಮಾತಿನ ತಿರ್ಗಣಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್, ಉಪಾಧ್ಯಕ್ಷ ಶ್ರೀವಾಸು ಪೂಜಾರಿ, sಸಾಹಿತ್ಯಿಕ-ಸಾಂಸ್ಕೃತಿಕ ಚಿಂತಕರಾದ ಶ್ರೀಮತಿ ಜ್ಯೋತಿ ಸಾಲಿಗ್ರಾಮ, ಶ್ರೀಮತಿ ಸುಮಿತ್ರ ಐತಾಳ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಸ್ವಾಗತಿಸಿ ಪ್ರಸ್ತಾಪಿಸಿದರು, ಟ್ರಸ್ಟಿ ಶ್ರೀ ಸತೀಶ್ ವಡ್ಡರ್ಸೆ ನಿರೂಪಿಸಿದರು