ಕಾರಂತ ಥೀಮ್ ಪಾರ್ಕ್ ಸ್ವಾತಂತ್ರೋತ್ಸವ ವಿಶೇಷ ಪ್ರದರ್ಶನ ಆಯೋಜನೆ
ಕೋಟ : ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿಸ್ವಾತಂತ್ರದ ಅಮೃತಮಹೋತ್ಸವದ ಅಂಗವಾಗಿ ಆಗಸ್ಟ್ 13, 14, 15 ರಂದು ಥೀಮ್ ಪಾರ್ಕ್ ಕಟ್ಟಡಕ್ಕೆ ತ್ರಿವಣ ಧ್ವಜ ಬಣ್ಣದ ವಿಶೇಷ ದೀಪಾಲಂಕಾರ, ಹಾಗೂ ಉಚಿತ ಸಂಗೀತ ಕಾರಂಜಿ ಪ್ರದರ್ಶನ ಸಂಜೆ 7 ರಿಂದ ವ್ಯವಸ್ಥೆ ಮಾಡಲಾಗಿದೆ. ಮೂರು ದಿನಗಳ ಕಾಲ ಧ್ವಜಾರೋಹಣ ಕೂಡ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀಆನಂದ್ ಸಿ ಕುಂದರ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.