ಜ್ಙಾನಮೂಲ ಗ್ರಂಥಾಲಯಗಳ ಬಳಕೆ ಹೆಚ್ಚಲಿ- ಶ್ರೀಮತಿ ಅಶ್ವಿನಿ ದಿನೇಶ್
ಕೋಟ : ಪುಸ್ತಕಗಳು ನೀಡುವ ಜ್ಞಾನವನ್ನು ಇತರ ಯಾವುದೇ ವಸ್ತುಗಳು ನೀಡಲು ಸಾಧ್ಯವಿಲ್ಲ, ಆಧುನಿಕ ಪ್ರಪಂಚದ ದಾಸರಾಗಿ ಪುಸ್ತಕಗಳ ಕಡೆ ಗಮನ ನೀಡದೇ ಕೇವಲ ಮೊಬೈಲ್ಗಳಲ್ಲಿ ಕಾಲ ಕಳೆಯುತ್ತಿದ್ದಾರೆ, ಡಾ. ಎಸ್ ಆರ್ ರಂಗನಾಥನ್ ಅವರು ಅಡಿಪಾಯ ಹಾಕಿ ನೀಡಿದ ಗ್ರಂಥಾಲಯ ಬಳಕೆ ಹೆಚ್ಚಾಗಿ ಜ್ಞಾನವೃದ್ಧಿ ಮಾಡಿಕೊಳ್ಳುವ ಎಂದು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್ ಅವರು ಹೇಳಿದರು.
ಅವರು ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ಇರುವ ಕೋಟತಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ನಡೆದ ಗ್ರಂಥಪಾಲಕರ ದಿನಾಚರಣೆ ಹಾಗೂ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪಂಚಾಯತ್ ಉಪಾಧ್ಯಕ್ಷ ಶ್ರೀ ವಾಸು ಪೂಜಾರಿ ಮಾತನಾಡಿ ಪಂಚಾಯತ್ ವತಿಯಿಂದ ಮಕ್ಕಳ ಭೌತಿಕ ವಿಕಸನ ಹಾಗೂ ಜ್ಞಾನವೃದ್ಧಿಗೆ ಸಂಬAಧಿಸಿದ ಸ್ಪರ್ಧೆಗಳು ಮುಂದಿನ ದಿನಗಳಲ್ಲಿ ಆಯೋಜಿಸುವ ಯೊಜನೆಯಿದೆ ಹಾಗೂ ಮಕ್ಕಳಿಗೆ ಗ್ರಂಥಾಲಯ ಮಹತ್ವ ಅರಿವು ಮೂಡಿಸುವ ಕೆಲಸ ಮಾಡಲಾಗುವುದೆಂದರು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀ ಶೇಖರ, ಥೀಮ್ ಪಾರ್ಕ್ ಸಿಬ್ಬಂದಿ ಶ್ರೀಮತಿ ಸುಜಾತ, ಗ್ರಂಥಾಲಯ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗ್ರಂಥಾಲಯ ಮೇಲ್ವಿಚಾರಕಿ ಶೈಲಜಾ ಕೆ ಎನ್ ಪ್ರಸ್ತಾಪಿಸಿ ನಿರೂಪಿಸಿದರು.