ಕಾರಂತ ಯುಗ ಮುಂದಿನ ಜನಾಂಗಕ್ಕೆ ರವಾನಿಸಲು ಥೀಮ್ ಪಾರ್ಕ್ ಸಹಕಾರಿ – ಶ್ರೀಮತಿ ಸುಶೀಲಾ ಸೋಮಶೇಖರ್
ಕೋಟ : ಕಾರಂತರ ಬದುಕಿನ ಪ್ರತಿಯೊಂದು ಹೆಜ್ಜೆಗಳು ಅನುಕರಣೀಯ, ಅವರ ಸಾಧನೆಯು ಯುವಜನಾಂಗದ ಬದುಕಿಗೆ ದಾರಿ ದೀಪವಾಗಿದ್ದು, ಕಾರಂತರ ವಿಚಾರಧಾರೆಗಳು ಮುಂದಿನ ಜನಾಂಗಕ್ಕೆ ತಲುಪಿಸಲು ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಸಹಕಾರಿ, ಇಲ್ಲಿ ನಡೆಯುವ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ಹೊಸ ಭಾಷ್ಯಕ್ಕೆ ನಾಂದಿಯಾಗುತ್ತಿದೆ ಎಂದು ಡಾ|| ಶಿವರಾಮ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಶ್ರೀಮತಿ ಸುಶೀಲಾ ಸೋಮಶೇಖರ್ ಅವರು ಹೇಳಿದರು.
ಅವರು ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಉಡುಪಿ ಜಿಲ್ಲಾ ರಜತ ಸಡಗರ-ವಿಚಾರ ಸಂಕಿರಣ, ವಚನ ನಿನಾದ ಕಾರ್ಯಕ್ರಮ ವಿವಶ-೨೦೨೨(ಸರಿಗಮದ ಬಾನ್ದನಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್, ಸಾಂಸ್ಕೃತಿಕ ಚಿಂತಕ ಶ್ರೀ ಮಂಜುನಾಥ ನಾÊರಿ, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಶ್ರೀ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಬಗ್ಗೆ ಶ್ರೀ ಉದಯ ಕನ್ಕಿಮಡಿ, ಉಪಸಂಪಾದಕರು ಸುದ್ದಿಮನೆ, ಜನಪದ ಸ್ಥಿತ್ಯಂತರ ಬಗ್ಗೆ ಡಾ. ರಘು ನಾಯಕ್, ಅಧ್ಯಕ್ಷರು, ಕ.ಸಾ.ಪ ಬೈಂದೂರು, ಉಡುಪಿ ಜಿಲ್ಲೆಯ ಶಾಸನಗಳ ಬಗ್ಗೆ ಶ್ರೀ ಪ್ರದೀಪ ಬಸ್ರೂರು, ಸಂಶೋಧಕರು, ಬರಹಗಾರರು ವಿಚಾರ ಸಂಕಿರಣವನ್ನು ನಡೆಸಿಕೊಟ್ಟರು. ವಚನ ಗಾನ ವೈಭವ ಶ್ರೀಮತಿ ಕವಿತಾ ಶೆಣೈ ಶಾಸ್ತಿçÃಯ ಸಂಗೀತಗಾರ್ತಿ ಮಂಗಳೂರು ಅವರಿಂದ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿ, ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಶ್ರೀಮತಿ ಮಂಜುಳಾ ತೆಕ್ಕಟ್ಟೆ ನಿರೂಪಿಸಿದರು.