ಡಾ|| ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಆಯ್ಕೆ
ಕೋಟ : ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ(ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ 2022ನೇ ಸಾಲಿನ ಡಾ|| ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ನ ದೃತಿ ಎಸ್, ಜಿ.ಎಂ. ವಿದ್ಯಾನಿಕೇತನ ಬ್ರಹ್ಮಾವರದ ವಿದ್ಯಾರ್ಥಿನಿ ಮಾನ್ವಿ ಆರ್, ಸ.ಹಿ.ಪ್ರಾ.ಶಾಲೆ ಮಣೂರು ಪಡುಕೆರೆ ವಿದ್ಯಾರ್ಥಿ ಲಕ್ಷ್ಮೀಶ ಟಿ ಶ್ರೀಯಾನ್ , ಕೆ.ಪಿ.ಎಸ್ ಬಿದ್ಕಲ್ಕಟ್ಟೆ ವಿದ್ಯಾರ್ಥಿನಿ ಶ್ರೀ ನಿತಾ ಎನ್, ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ.ಶಾಲೆ ಗಂಗೊಳ್ಳಿ ವಿದ್ಯಾರ್ಥಿ ಸಂಜಿತ್ ಎಂ, ಸ.ಹಿ.ಪ್ರಾ.ಶಾಲೆ ಮಣೂರು-ಪಡುಕೆರೆ ವಿದ್ಯಾರ್ಥಿನಿ ಲಿಖಿತಾ, ಶ್ರೀ ದು.ಪ.ಅ.ಹಿ.ಪ್ರಾ.ಶಾಲೆ ಮಂದಾರ್ತಿ ವಿದ್ಯಾರ್ಥಿನಿ ಸಿರಿ, ರೋಟರಿ ಕೇಂದ್ರೀಯ ಶಾಲೆ ವಿದ್ಯಾರ್ಥಿನಿ ಇಶಾ ಪ್ರದೀಪ್ ದೇವಾಡಿಗ, ಮಿಲಾಗ್ರೀಸ್ ಆಂಗ್ಲ ಮಾಧ್ಯಮ ಶಾಲೆ ಕಲ್ಯಾಣಪುರ ವಿದ್ಯಾರ್ಥಿನಿ ಪ್ರವಣ್ಯ ಯು ರಾವ್, ಸ.ಹಿ.ಪ್ರಾ.ಶಾಲೆ ಚಿತ್ರಪಾಡಿ ವಿದ್ಯಾರ್ಥಿನಿ ಅನ್ವಿತಾ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ಕಟ್ಟೆ ವಿದ್ಯಾರ್ಥಿ ಆದೀಶ ಪಿ.ಬಿ,ಶ್ರೀ ರವಿ ಶಂಕರ ವಿದ್ಯಾಮಂದಿರ ಕೊಂಚಾಡಿ ಶಾಲೆ ವಿದ್ಯಾರ್ಥಿನಿ ಪ್ರಾಪ್ತಿ ಡಿ ಶೆಟ್ಟಿ, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ವಿದ್ಯಾರ್ಥಿನಿ ಮಹಾಲಸ ಶ್ಯಾನುಭಾಗ್, ಸ.ಮಾ.ಹಿ.ಪ್ರಾ.ಶಾಲೆ ಅಜೆಕಾರು ವಿದ್ಯಾರ್ಥಿನಿ ಸುನಿಧಿ ಎಸ್ ಅಜೆಕಾರು, ಆದಿವುಡುಪಿ ಆಂಗ್ಲ ಮಾಧ್ಯಮ ಶಾಲೆ ಉಡುಪಿ ವಿದ್ಯಾರ್ಥಿ ಅಮೋಘ ಕಂಬಳಕಟ್ಟ, ನಾರಾಯಣ ವಿಶೇಷ ಮಕ್ಕಳ ಶಾಲೆ ತಲ್ಲೂರು ವಿದ್ಯಾರ್ಥಿ ಅನುರಾಗ್ ನಾಯಕ್, ಲಿಟಲ್ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ವಿದ್ಯಾರ್ಥಿನಿ ಆರಾಧ್ಯ ಎಸ್ ಶೆಟ್ಟಿ, ಕುವೆಂಪು ಶತಮಾನೋತ್ಸವ ಸ.ಶಾಲೆ ತೆಕ್ಕಟ್ಟೆ ಸಮೃದ್ಧಿ ಎಸ್ ಮೊಗವೀರ, ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆ ಮಣಿಪಾಲ ವಿದ್ಯಾರ್ಥಿ ಬಿ ಸಮರ್ಥ ಎಸ್ ಭಟ್ ಸ.ಮಾ.ಹಿ.ಪ್ರಾ.ಶಾಲೆ ಹೆಬ್ರಿ ವಿದ್ಯಾರ್ಥಿ ಪ್ರೀತಮ್ ಅವರನ್ನು ಆಯ್ಕೆ ಮಾಡಲಾಗಿದ್ದು ಡಿಸೆಂಬರ್ 25 ರಂದು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಸಂಜೆ 5 ಗಂಟೆಗೆ ಪ್ರದಾನ ಮಾಡಲಾಗುವುದೆಂದು ಡಾ|| ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಶ್ರೀಮತಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.