ಕಾರಂತ ಥೀಮ್ ಪಾರ್ಕ್ : ಸಾಧಕರಿಗೆ ದತ್ತಿ ಪುರಸ್ಕಾರ
ಕೋಟ : ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ
ದಿ.ಉಪೇಂದ್ರ ಐತಾಳ್ ಸ್ಮಾರಕ ‘ಕೃಷಿ ಪರಿಶ್ರಮ ಪುರಸ್ಕಾರಕ್ಕೆ ಶ್ರೀ ಸದಾಶಿವ ಐತಾಳ್,
ದಿ.ರಾಘವೇಂದ್ರ ಉರಾಳ ಸ್ಮಾರಕ ‘ಸಂಶೋಧಕ ಸಾಧಕ ಪುರಸ್ಕಾರ’ ಕ್ಕೆ ಶ್ರೀ ಪ್ರದೀಪ್ ಬಸ್ರೂರು
ದಿ.ಡಾ. ಆನಂದ ಶೆಟ್ಟಿ ಸ್ಮಾರಕ ‘ಆದರ್ಶ ಶಿಕ್ಷಕ ಪುರಸ್ಕಾರ’ ಕ್ಕೆ ಶ್ರೀ ಭಾಸ್ಕರ ಪೂಜಾರಿ,
ದಿ ಮನೋಹರ್ ತೋಳಾರ್ ಸ್ಮಾರಕ ಕ್ರೀಡಾ ಪುರಸ್ಕಾರಕ್ಕೆ ಶ್ರೀ ಶಿವನಾರಾಯಣ ಐತಾಳ್
ಅವರನ್ನು ಆಯ್ಕೆ ಮಾಡಲಾಗಿದೆ. ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಡಿಸೆಂಬರ್ 25 ರಂದು ಸಂಜೆ 5 ಗಂಟೆಗೆ ನಡೆಯುವ ಅನೂಹ್ಯ-2022(ನಾವೀನ್ಯದ ಗೌಜಿ) ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಡಾ|| ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.