ಹಾಸ್ಯ ಕಲಾವಿದ ಶ್ರೀ ನಾಗರಾಜ್ ತೆಕ್ಕಟ್ಟೆ ಅವರಿಗೆ ದಿ. ಕೋಟ ಮಂಜುನಾಥ್ ಸ್ಮಾರಕ ದತ್ತಿ ಪುರಸ್ಕಾರಕ್ಕೆ ಆಯ್ಕೆ
ಕೋಟ : ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ದಿ.ಕೋಟ ಮಂಜುನಾಥ್ ಸ್ಮಾರಕ ದತ್ತಿ ಪುರಸ್ಕಾರಕ್ಕೆ ಹಾಸ್ಯ ಕಲಾವಿದ, ರಂಗಭೂಮಿ ಕಲಾವಿದ,ನಿರ್ದೇಶಕ, ಸಾಮಾಜಿಕ ಜಾಲತಾಣದ ಮೂಲಕ ಕುಂದಾಪ್ರ ಭಾಷೆಯನ್ನು ವಿಶ್ವದೆಲ್ಲಡೆ ಪಸರಿಸಿದ ಶ್ರೀ ನಾಗರಾಜ್ ತೆಕ್ಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.
ಜನವರಿ ೨೬ ರಂದು ಸಂಜೆ ೬ ಗಂಟೆಗೆ ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಡಾ|| ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬರ್ಬರೀಕ ನಾಟಕ ಪ್ರದರ್ಶನ
ಉಡುಪಿ ಜಿಲ್ಲಾ ಶಿಕ್ಷಕರ ಬಳಗ ಅಭಿನಯಿಸಿರುವ ಶಶಿರಾಜ್ ಕಾವೂರು ರಚಿಸಿ, ಬಿ.ಎಸ್.ರಾಮ್ ಶೆಟ್ಟಿ ಹಾರಾಡಿ ಬೆಳಕು ವಿನ್ಯಾಸ, ನಿರ್ದೆಶನದ, ರಮೇಶ್ ಕಪಿಲೇಶ್ವರ ವರ್ಣಾಲಂಕಾರದ ರಾಷ್ಟçಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ನಾಟಕ ಬರ್ಬರೀಕ ನಾಟಕ ಪ್ರದರ್ಶನ ಸಭಾ ಕಾರ್ಯಕ್ರಮದ ನಂತರ ನಡೆಯಲಿದೆ.