ಕಲೆ ಸಂಸ್ಕೃತಿಯಿoದ ಸ್ವಾಸ್ಥ್ಯ ಸಮಾಜ ಸೃಷ್ಠಿ-ಶ್ರೀ ವೆಂಕಟೇಶ್ ವೈದ್ಯ
ಕೋಟ : ಕಲೆಸಂಸ್ಕೃತಿಯಿoದ ಸ್ವಾಸ್ಥ್ಯ ಸಮಾಜ ಸೃಷ್ಠಿ ಸಾಧ್ಯ, ಯುವ ಜನಾಂಗವನ್ನು ನಮ್ಮ ಸಂಸ್ಕೃತಿ ಕಲೆಗಳಿಗೆ ತೊಡಗಿಸಕೊಳ್ಳುವಂತೆ ಸಂಘಟನೆಯ ಮೂಲಕ ಪ್ರೇರೆಪಿಸಬೇಕು, ಥೀಮ್ ಪಾರ್ಕ್ ನಲ್ಲಿ ನಡೆಯುವ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ವಿಭಿನ್ನವಾಗಿವೆ ಎಂದು ಯಕ್ಷ ಸಂಘಟಕ ಶ್ರೀ ವೇಂಕಟೇಶ ವೈದ್ಯ ಅವರು ಹೇಳಿದರು.
ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ನಡೆದ ತಿಂಗಳ ಸಡಗರ “ಯಕ್ಷ ಗಾನ ವೈಭವ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಮಾತನಾಡಿ ಯಕ್ಷಗಾನದ ಸೊಗಡನ್ನು ವಿದೇಶಗಳಲ್ಲಿ ಪಸರಿಸುವಲ್ಲಿ ಕಾರಂತರ ಕೊಡುಗೆ ಅನನ್ಯವಾದುದು, ಯಕ್ಷಗಾನದಿಂದ ಸಂಸ್ಕೃತಿ ಅನಾವರಣದ ಜೊತೆ ಜ್ಞಾನ ವೃದ್ಧಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ,ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ದಿನೇಶ್, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷ ಶ್ರೀ ಮನೋಜ್ ಕುಮಾರ್ , ಕೋಟತಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಸುಮತಿ ಅಂಚನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ನರೇಂದ್ರ ಕುಮಾರ್ ನಿರೂಪಿಸಿ,ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರವೀಂದ್ರ ರಾವ್ ಸ್ವಾಗತಿಸಿ, ಉಪಾಧ್ಯಕ್ಷ ಶ್ರೀ ವಾಸು ಪೂಜಾರಿ ವಂದಿಸಿದರು.