ಕಾರಂತರ ಬದುಕು ಅನುಕರಣೀಯ –ಶ್ರೀ ಕೆ ಸಿ ಪ್ರಕಾಶ್
ಕೋಟ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಶಿವರಾಮ ಕಾರಂತರ ಬದುಕು ನಮಗೆಲ್ಲ ಸಂದೇಶವಿದ್ದoತೆ, ಅವರು ನಮಗಾಗಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಥೀಂ ಪಾರ್ಕ್ ಇನ್ನಷ್ಟೂ ಅಭಿವೃದ್ಧಿ ಹೊಂದಿ ಮಕ್ಕಳಿಗೆ ಜ್ಞಾನದ ಮಂದಿರವಾಗಿ ರೂಪುಗೊಳ್ಳಲಿ ಎಂದು ಲೋಕಾಯುಕ್ತ ಡಿವೈಎಸ್ಪಿ ಶ್ರೀ ಕೆ ಸಿ ಪ್ರಕಾಶ್ ಅವರು ಹೇಳಿದರು.
ಅವರು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ಗೆ ಭೇಟಿ ನೀಡಿ ಗ್ರಂಥಾಲಯ, ಅಂಗನವಾಡಿ, ಆರ್ಟ್ ಗ್ಯಾಲರಿ, ಕಿರು ಸಭಾಂಗಣ, ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಹೆಡ್ ಕಾನ್ಸೆ÷್ಟÃಬಲ್ ಶ್ರೀ ಸತೀಶ್ ಹಂದಾಡಿ, ಚಾಲಕ ಶ್ರೀ ಸತೀಶ್ ಆಚಾರ್ಯ, ಥೀಂ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.