ಕಾರಂತ ಥೀಮ್ ಪಾರ್ಕ್ : ಡಾ|| ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಆಯ್ಕೆ
ಕೋಟ : ಡಾ|| ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಅವರ ಆಶ್ರಯದಲ್ಲಿ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕೊಡಮಾಡುವ ಡಾ|| ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಭಾರತಿ ಮಯ್ಯ, ವಾಸಂತಿ ಅಂಬಲಪಾಡಿ, ನಾಗರತ್ನ ಗುಂಡ್ಮಿ , ಪ್ರೇಮ ಬಾರ್ಕೂರು, ವಿಜಯಲಕ್ಷ್ಮೀಮೆಟ್ಟಿನಹೊಳೆ, ಲಿಖಿತ ಶೆಟ್ಟಿ, ಶರಣ್ಯ ಭಟ್, ಸುಮಿತಾ ಶೆಟ್ಟಿ ಉಪ್ಪುಂದ, ಯಶೋಧ ಗಾಣಿಗ, ಸುಷ್ಮಾ ಆಚಾರ್, ಅಮೃತ ಉಪಾಧ್ಯ, ಅಮಿತಾಂಜಲಿ ಕಿರಣ್, ಸದಾರಮೆ ಕಾರಂತ, ಪೂರ್ಣಿಮಾ ಯಡ್ತಾಡಿ, ಪ್ರೇಮ ಪೂಜಾರಿ ಕುಂಭಾಶಿ, ಸಂಗೀತ ಹರ್ತಟ್ಟು, ಆಶಾ ರೋಹನ್ ವಾಜ್ ಉದ್ಯಾವರ ಅವರನ್ನು ಆಯ್ಕೆ ಮಾಡಲಾಗಿದ್ದು ಮಾರ್ಚ್ 30 ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶ್ರೀ ಆನಂದ್ ಸಿ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.